ಗುರುವಾರ , ಮಾರ್ಚ್ 4, 2021
30 °C
ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಯುನೈಟೆಡ್‌ ಏರ್‌ಲೈನ್ಸ್‌ ವಿಮಾನ ತುರ್ತಾಗಿ ಭೂ ಸ್ಪರ್ಶ

‘ಬೋಯಿಂಗ್ 777‘ ತನಿಖೆಗಾಗಿ ಎಫ್‌ಎಎ ಆದೇಶ

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ಫ್ರಾನ್ಸಿಸ್ಕೊ: ಎಂಜಿನ್‌ ದೋಷದಿಂದಾಗಿ ಡೆನ್ವರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುನೈಟೆಡ್‌ ಏರ್‌ಲೈನ್‌ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಬೋಯಿಂಗ್‌ 777 ಮಾದರಿಯ ಎಂಜಿನ್‌ಗಳನ್ನು ತಪಾಸಣೆ ನಡೆಸುವಂತೆ ಅಮೆರಿಕದ ವಿಮಾನಯಾನ ನಿಯಂತ್ರಣ ಸಂಸ್ಥೆ ಯುನೈಟೆಡ್ ಕಂಪನಿಗೆ ಆದೇಶಿಸಿದೆ.

ವಿಮಾನಯಾನ ನಿಯಂತ್ರಣ ಸಂಸ್ಥೆ ತಪಾಸಣೆ ಪೂರ್ಣಗೊಳಿಸಿ, ಈ ಮಾದರಿಯ ಎಂಜಿನ್‌ಗಳನ್ನು ಶಿಫಾರಸು ಮಾಡುವವರೆಗೆ, ಆ ವಿಮಾನಗಳನ್ನು ತಾತ್ಕಾಲಿಕವಾಗಿ ಸೇವೆಯಿಂದ ತೆಗೆದುಹಾಕುತ್ತಿರುವುದಾಗಿ ಯುನೈಟೆಡ್ ಏರ್‌ಲೈನ್ ಸಂಸ್ಥೆ ಹೇಳಿದೆ.

231 ಪ್ರಯಾಣಿಕರು ಮತ್ತು ಹತ್ತು ಮಂದಿ ಸಿಬ್ಬಂದಿಯೊಂದಿಗೆ ಡೆನ್ವರ್‌ ಅಂತರರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿದ್ದ ಯುನೈಟೆಡ್ ಏರ್‌ಲೈನ್ ವಿಮಾನ 328, ಎಂಜಿನ್ ದೋಷದಿಂದಾಗಿ, ತಕ್ಷಣವೇ ತುರ್ತಾಗಿ ಭೂ ಸ್ಪರ್ಶ ಮಾಡಿತ್ತು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ.

ಈ ಘಟನೆ ನಡೆದು ಒಂದು ದಿನದ ನಂತರ ಅಮೆರಿಕ ಸರ್ಕಾರದ ವಿಮಾನಯಾನ ನಿಯಂತ್ರಣ ಸಂಸ್ಥೆ ಎಂಜಿನ್‌ ತಪಾಸಣೆಗೆ ಆದೇಶಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು