ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ ಸೂಚ್ಯಂಕ: ಫಿನ್‌ಲ್ಯಾಂಡ್‌ಗೆ ಅಗ್ರಸ್ಥಾನ

Last Updated 19 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಹೆಲ್ಸಿಂಕಿ (ಫಿನ್‌ಲ್ಯಾಂಡ್): ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿಯಲ್ಲಿ ಫಿನ್‌ಲ್ಯಾಂಡ್‌ ಸತತವಾಗಿ ನಾಲ್ಕನೇ ವರ್ಷವೂ ಮೊದಲನೇ ಸ್ಥಾನದಲ್ಲಿದೆ.

ಕೋವಿಡ್‌–19 ಸಾಂಕ್ರಾಮಿಕದ ನಡುವೆಯೂ ಫಿನ್‌ಲ್ಯಾಂಡ್‌ ಈ ಗರಿಮೆಯನ್ನು ಪಡೆಯಲು ಯಶಸ್ವಿಯಾಗಿದೆ.

ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗಿದೆ.

ಪರಸ್ಪರ ನಂಬಿಕೆಯ ಕ್ರಮಾಂಕದಲ್ಲಿ ಫಿನ್‌ಲ್ಯಾಂಡ್ ಉನ್ನತ ಸ್ಥಾನದಲ್ಲಿದ್ದು, ಇದು ಕೋವಿಡ್‌ ಸಂದರ್ಭದಲ್ಲಿ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸಲು ನೆರವಾಗಿದೆ ಎಂದು ವರದಿ ತಿಳಿಸಿದೆ.

ಅಗ್ರ ಸ್ಥಾನಗಳಲ್ಲಿ ಯುರೋಪಿಯನ್‌ ರಾಷ್ಟ್ರಗಳು ಮತ್ತೊಮ್ಮೆ ಪ್ರಾಬಲ್ಯ ಗಳಿಸಿವೆ. ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್, ಐಲ್ಯಾಂಡ್‌ ಮತ್ತು ನೆದರ್ಲೆಂಡ್‌ ನಂತರದ ಸ್ಥಾನದಲ್ಲಿವೆ.

ಕಳೆದ ಬಾರಿ ಎಂಟನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ ಈ ಬಾರಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಜರ್ಮನಿ 13, ಫ್ರಾನ್ಸ್‌ 21ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ 13ರಿಂದ 17ನೇ ಸ್ಥಾನಕ್ಕೆ ಕುಸಿದಿದ್ದರೆ, ಅಮೆರಿಕ 19ನೇ ಸ್ಥಾನಕ್ಕೆ ಇಳಿದಿದೆ. ಅಫ್ಗಾನಿಸ್ತಾನವನ್ನು ವಿಶ್ವದ ಅತೃಪ್ತಿಕರ ರಾಷ್ಟ್ರವೆಂದು ಪರಿಗಣಿಸಲಾಗಿದೆ.

‘ಕೋವಿಡ್‌ ಜನರ ಜೀವನದ ಮೇಲೆ ಪರಿಣಾಮ ಬೀರಿರುವುದು ನಿಜ. ಆದರೆ, ಇದು ಸಹಭಾಳ್ವೆ ಮತ್ತು ಒಗ್ಗಟ್ಟನ್ನು ಕಲಿಸಿದೆ. ಸಂಪತ್ತಿನ ಸಂಗ್ರಹದ ಬದಲು ಯೋಗಕ್ಷೇಮವನ್ನು ಗುರಿಯಾಗಿಸಿಕೊಳ್ಳಬೇಕು ಎಂಬ ತುರ್ತು ಅಗತ್ಯವನ್ನು ಕೋವಿಡ್‌ನಿಂದ ಅರಿಯಬೇಕಿದೆ’ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT