ಶುಕ್ರವಾರ, ಮೇ 14, 2021
21 °C

ಸಾಫ್ಟ್‌ವೇರ್‌ ಕಂಪನಿ ಅಡೋಬಿಯ ಸಹ-ಸಂಸ್ಥಾಪಕ ಚಾರ್ಲ್ಸ್ ‘ಚಕ್’ ಗೆಶ್ಕೆ ನಿಧನ

ಎಪಿ Updated:

ಅಕ್ಷರ ಗಾತ್ರ : | |

ಲಾಸ್‌ ಅಲ್ಟೊಸ್‌ (ಅಮೆರಿಕ): ಪ್ರಮುಖ ಸಾಫ್ಟ್‌ವೇರ್‌ ಕಂಪನಿ ಅಡೋಬಿಯ ಸಹ-ಸಂಸ್ಥಾಪಕ ಹಾಗೂ ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮ್ಯಾಟ್‌ (ಪಿಡಿಎಫ್‌) ತಂತ್ರಜ್ಞಾನವನ್ನು ರೂಪಿಸುವಲ್ಲಿ ನೆರವಾಗಿದ್ದ ಚಾರ್ಲ್ಸ್ ‘ಚಕ್’ ಗೆಶ್ಕೆ (81) ಅವರು ಶುಕ್ರವಾರ ನಿಧನರಾದರು.

ಗೆಶ್ಕೆ ಅವರು ಸ್ಯಾನ್‌ ಫ್ರಾನ್ಸಿಸ್ಕೊನ ಕೊಲ್ಲಿ ಪ್ರದೇಶದ ಉಪನಗರ ಲಾಸ್‌ ಅಲ್ಟೊಸ್‌ನಲ್ಲಿ ವಾಸವಾಗಿದ್ದರು.

‘ಚಾರ್ಲ್ಸ್ ಚಕ್ ಅವರ ನಿಧನದಿಂದಾಗಿ ಅಡೋಬಿ ಸಮುದಾಯ ಮತ್ತು ತಂತ್ರಜ್ಞಾನ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಅವರು ನಮಗೆ ದಶಕಗಳಿಂದ ಮಾರ್ಗದರ್ಶಕ ಮತ್ತು ನಾಯಕರಾಗಿದ್ದರು’ ಎಂದು ಅಡೋಬಿ ಸಿಇಒ ಶಂತನು ನಾರಾಯಣ್‌ ಅವರು ತಮ್ಮ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್‌ ಸಂದೇಶದಲ್ಲಿ ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ... ರಷ್ಯಾ: ಸಾವಿನ ಅಂಚಿನಲ್ಲಿ ಪುಟಿನ್‌ ಕಡು ವಿರೋಧಿ ಅಲೆಕ್ಸಿ ನವಾಲ್ನಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು