ಸೋಮವಾರ, ಮಾರ್ಚ್ 20, 2023
24 °C

ಜಿ20 ಶೃಂಗ | ಭಾರತದ ಅಧ್ಯಕ್ಷತೆಯಲ್ಲಿ ಪ್ರಗತಿ ನಿರೀಕ್ಷೆ: ಗೀತಾ ಗೋಪಿನಾಥ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಪ್ರಮುಖ ಮೂರು ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿ ಸಾಧಿಸಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಆಶಿಸಿದ್ದಾರೆ.

‘ಜಾಗತಿಕ ಸಾಲ ಪರಿಹಾರ ನಿರ್ವಹಣೆ, ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ, ಮತ್ತು ತಾಪಮಾನ ನಿರ್ವಹಣೆ ಕುರಿತ ಹಣಕಾಸಿನ ನೆರವು’ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ನಿರೀಕ್ಷೆಯಿದೆ ಎಂದು ಹೇಳಿದರು. ಜಿ20 ಕುರಿತು ಚರ್ಚಿಸಲು ಭಾರತಕ್ಕೆ ಭೇಟಿ ನೀಡಿರುವ ಅವರು, ತಮ್ಮ ಅಭಿಪ್ರಾಯ ಕುರಿತ ವಿಡಿಯೊವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಅತಿ ಕಡಿಮೆ ಆದಾಯದ ಹಲವು ದೇಶಗಳು ಸಾಲದ ಸಂಕಷ್ಟದಲ್ಲಿವೆ. ಸಾಲ ಪರಿಹಾರಕ್ಕಾಗಿ ಜಿ–20 ಒಂದು ಕಾರ್ಯಸೂಚಿ ಹೊಂದಿದ್ದರೂ ಕಾರ್ಯವಿಧಾನವನ್ನು ಸುಧಾರಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದು ಈಗಿನ ಅಗತ್ಯವೂ ಆಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು