ಸೋಮವಾರ, ಅಕ್ಟೋಬರ್ 18, 2021
23 °C

ನೈಜೀರಿಯಾ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: 19 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಾಂಕೇತಿಕ ಚಿತ್ರ

ಕಾನೊ, ನೈಜೀರಿಯಾ:  ವಾಯುವ್ಯ ನೈಜೀರಿಯಾ ಮಾರುಕಟ್ಟೆಯೊಂದರಲ್ಲಿ ಜಾನುವಾರು ಕಳ್ಳರ ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶಸ್ತ್ರಸಜ್ಜಿತ ಗುಂಪು ನಡೆಸಿದ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ ಗುರುವಾರ ಸ್ಥಳೀಯ ಕಣ್ಗಾವಲುಗಾರರು ನಡೆಸಿದ ಕಾರ್ಯಾಚರಣೆಯಲ್ಲಿ 11 ಡಕಾಯಿತರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎಂದು ತಿಳಿಸಲಾಗಿದೆ.

ವಾಯುವ್ಯ ಮತ್ತು ಮಧ್ಯ ನೈಜೀರಿಯಾದಲ್ಲಿ ಜಾನುವಾರು ಕಳ್ಳರು, ಅಪಹರಣಕಾರರು ಮತ್ತು ಕ್ರಿಮಿನಲ್‌ ಗ್ಯಾಂಗ್‌ಗಳ ಹಾವಳಿ ವ್ಯಾಪಕವಾಗಿದೆ. ಈ ಗ್ಯಾಂಗ್‌ ಸ್ಥಳೀಯರನ್ನು ಲೂಟಿ ಮಾಡುವುದರ ಜೊತೆಗೆ ಕೊಲೆ ಮತ್ತು ಅಪಹರಣ ಕೃತ್ಯಗಳನ್ನು ಅವ್ಯಾಹತವಾಗಿ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು