ಮಂಗಳವಾರ, ಆಗಸ್ಟ್ 9, 2022
23 °C

ಕೊಳಚೆ ನೀರಿನಲ್ಲಿ ಕೋವಿಡ್: 2.9 ಲಕ್ಷ ಪರೀಕ್ಷೆ ಕಿಟ್ ವಿತರಿಸಲಿದೆ ಹಾಂಗ್‌ಕಾಂಗ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್‌: ಇತ್ತೀಚೆಗೆ ಕೊಳಚೆ ನೀರಿನ ಮಾದರಿಯಲ್ಲಿ ಕೋವಿಡ್‌–19 ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹಾಂಗ್‌ಕಾಂಗ್‌ ವಿಶೇಷ ಆಡಳಿತ ವಲಯ (ಎಚ್‌ಕೆಎಸ್‌ಎಆರ್‌) ಸರ್ಕಾರ, 2.9 ಲಕ್ಷ ಕೋವಿಡ್‌ ರ್‍ಯಾಪಿಡ್ ಆಂಟಿಜನ್‌ ಟೆಸ್ಟ್‌ (ಆರ್‌ಎಟಿ) ಕಿಟ್‌ ವಿತರಿಸುವುದಾಗಿ ಭಾನುವಾರ ಹೇಳಿದೆ.

ಕೊಳಚೆ ನೀರಿನಲ್ಲಿ ಕೋವಿಡ್‌ ಪತ್ತೆಯಾಗಿರುವ ಪ್ರದೇಶದ ನಿವಾಸಿಗಳು, ಸ್ವಚ್ಛತಾ ಕಾರ್ಮಿಕರು ಮತ್ತು ನಿರ್ವಹಣಾ ಸಿಬ್ಬಂದಿಗೆ ಪರೀಕ್ಷೆ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಇದರಿಂದ ಸೋಂಕು ಪತ್ತೆ ಮಾಡಲು ಅನುಕೂಲವಾಗಲಿದೆ ಎಂದು 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಯಾವುದೇ ಕೋವಿಡ್‌ ಪ್ರಕರಣ ಕಂಡು ಬಂದರೆ ಸರ್ಕಾರದ ಆನ್‌ಲೈನ್‌ ವೇದಿಕೆ ಮೂಲಕ ವರದಿ ಮಾಡುವಂತೆ ಆರ್‌ಎಟಿ ಕಿಟ್‌ ಬಳಕೆದಾರರನ್ನು ಎಚ್‌ಕೆಎಸ್‌ಎಆರ್‌ ಸರ್ಕಾರ ಆಗ್ರಹಿಸಿದೆ.

ಹಾಂಗ್‌ಕಾಂಗ್‌ನಲ್ಲಿ ಕೋವಿಡ್‌–19 ದೃಢಪಟ್ಟ 1,828 ಹೊಸ ಪ್ರಕರಣಗಳು ಭಾನುವಾರ ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು