ಗುರುವಾರ , ಡಿಸೆಂಬರ್ 3, 2020
20 °C

ಹ್ಯೂಸ್ಟನ್‌: ಪೊಲೀಸ್‌ ಅಧಿಕಾರಿಯ ಹತ್ಯೆ; ಆರೋಪಿಗಳಿಗಾಗಿ ಶೋಧ

ಎಪಿ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್ ‌(ಅಮೆರಿಕ): ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರನ್ನು ಸೋಮವಾರ ಉತ್ತರ ಹ್ಯೂಸ್ಟನ್‌ ಮೋಟೆಲ್‌ ಪಕ್ಕದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹ್ಯೂಸ್ಟನ್‌ ಪೊಲೀಸ್‌ ಸಾರ್ಜೆಂಟ್‌ ಸೀನ್‌ ರಿಯಾಸ್‌ ಅವರು ರಕ್ತಸಿಕ್ತಗೊಂಡ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ 1.30ರಷ್ಟಕ್ಕೆ ಮೋಟೆಲ್‌ ಕಚೇರಿಗೆ ಆಗಮಿಸಿದ್ದರು. ಅವರ ಶರೀರದಲ್ಲಿ ಹಲವು ಗುಂಡಿನ ಗಾಯಗಳಿದ್ದವು ಎಂದು ಸಾಕ್ಷಿದಾರರು ಪೊಲೀಸರಿಗೆ ಮಾಹಿತಿ ನೀಡಿದರು.

ಸೀನ್‌ ರಿಯಾಸ್‌ ಅವರು ಸಾಮಾನ್ಯ ಉಡುಗೆಯಲ್ಲಿ ಅಂತರರಾಜ್ಯ 45 (ಹೆದ್ದಾರಿ) ಮೂಲಕ ಕೆಲಸದ ಸ್ಥಳದತ್ತ ಸಾಗುತ್ತಿದ್ದರು.  ಈ ವೇಳೆ ನೀಲಿ ಬಣ್ಣದ ಮರ್ಸಿಡಿಸ್‌ ಕಾರಿನಲ್ಲಿದ್ದ ವ್ಯಕ್ತಿಯೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮುಖ್ಯಸ್ಥ ಆರ್ಟ್ ಅಸೆವೆಡೊ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು