ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ನೀರಾ ಟಂಡನ್ ಶ್ವೇತ ಭವನದ ಸಿಬ್ಬಂದಿ ಕಾರ್ಯದರ್ಶಿ

Last Updated 23 ಅಕ್ಟೋಬರ್ 2021, 5:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್ ನಿವಾಸಿ, ನೀತಿ ರಚನಾ ತಜ್ಞೆ ನೀರಾ ಟಂಡನ್‌ ಅವರನ್ನು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿಯಾಗಿ ಅಧ್ಯಕ್ಷ ಜೋ ಬೈಡನ್ ಅವರು ನೇಮಕ ಮಾಡಿದ್ದಾರೆ.

51 ವರ್ಷದ ಟಂಡನ್ ಅವರು ಅಧ್ಯಕ್ಷ ಬೈಡನ್ ಅವರ ಹಿರಿಯ ಸಲಹೆಗಾರರಾಗಿದ್ದರು. ಆಡಳಿತಕ್ಕೆ ಸಂಬಂಧಿತ ಪತ್ರಗಳ ನಿರ್ವಹಣೆಯಲ್ಲಿ ಸಿಬ್ಬಂದಿ ಕಾರ್ಯದರ್ಶಿ ಪಾತ್ರ ಪ್ರಮುಖವಾದುದು. ಈ ಹುದ್ದೆಗೆ ನೇಮಕವಾಗುವ ವ್ಯಕ್ತಿ, ಶ್ವೇತಭವನದ ಪ್ರಭಾವಿ ಅಧಿಕಾರಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಹೊಸ ಕಾರ್ಯಭಾರದ ಜೊತೆಗೆ ಅವರು ಹಿರಿಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುವರು. ಪ್ರಮುಖ ಹುದ್ದೆಗೆ ಇವರ ಹೆಸರನ್ನು ರಿಪಬ್ಲಿಕನ್ ಸಂಸದರು ಕಡೆಗಣಿಸಿದ್ದ ಎಂಟು ತಿಂಗಳ ನಂತರ ಈ ನೇಮಕ ಆಗಿದೆ. ಸಿಬ್ಬಂದಿ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಲು ಸೆನೆಟ್‌ನ ಅನುಮೋದನೆ ಅಗತ್ಯವಿಲ್ಲ ಎಂದೂ ತಿಳಿಸಿದೆ.

ಟಂಡನ್‌ ಹಿಂದೆ ಹಿಲರಿ ಕ್ಲಿಂಟನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಪ್ರಚಾರ ಕಾರ್ಯದ ನೀತಿ ನಿರ್ದೇಶಕಿಯಾಗಿದ್ದರು. 2008ಕ್ಕೂ ಮುನ್ನ ಕ್ಲಿಂಟನ್‌ ಅವರ ಕಚೇರಿಯಲ್ಲಿ ಶಾಸನಸಭೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT