ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ವರ್ಷ ಜೈಲು ಶಿಕ್ಷೆಯ ಆತಂಕದಲ್ಲಿ ಬಿಟ್‌ಕನೆಕ್ಟ್ ಸಂಸ್ಥಾಪಕ ಭಾರತೀಯ ಪ್ರಜೆ

240 ಕೋಟಿ ಡಾಲರ್ ವಂಚನೆ ಆರೋಪ
Last Updated 26 ಫೆಬ್ರುವರಿ 2022, 4:39 IST
ಅಕ್ಷರ ಗಾತ್ರ

ವಾಷಿಂಗ್ಟನ್: 240 ಕೋಟಿ ಡಾಲರ್ ಮೌಲ್ಯದ ಜಾಗತಿಕ ನಕಲಿ ಯೋಜನೆ ರೂಪಿಸಿದ ಆರೋಪದ ಮೇಲೆ ಕ್ರಿಪ್ಟೋಕರೆನ್ಸಿ ಹೂಡಿಕೆ ವೇದಿಕೆ ಬಿಟ್‌ಕನೆಕ್ಟ್, ಸಂಸ್ಥಾಪಕ ಭಾರತೀಯ ಪ್ರಜೆ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕದ ಫೆಡರಲ್ ತನಿಖಾ ಸಂಸ್ಥೆ ತಿಳಿಸಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಬಿಟ್‌ಕಾಯಿನ್ 3.4 ಶತಕೋಟಿಯ ಗರಿಷ್ಠ ಮಾರುಕಟ್ಟೆ ಬಂಡವಾಳೀಕರಣವನ್ನು ತಲುಪಿದೆ ಎಂದು ಗುಜರಾತ್‌ನ ಹೇಮಾಲ್‌ ಮೂಲದ ಸತೀಶ್ ಕುಂಭಾನಿ (36) ಬಿಟ್‌ಕನೆಕ್ಟ್‌ನ ‘ಲೆಂಡಿಂಗ್ ಪ್ರೋಗ್ರಾಂ’ಬಗ್ಗೆ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

‘ಈ ಯೋಜನೆ ಮೂಲಕ ಹೂಡಿಕೆದಾರರಿಗೆ 200 ಕೋಟಿ ಡಾಲರ್‌ಗಿಂತಲೂ ಹೆಚ್ಚು ವಂಚನೆ ಮಾಡಲಾಗಿದೆ’ ಎಂದು ದಕ್ಷಿಣ ಕ್ಯಾಲಿಫೋರ್ನಿಯಾದ ಅಮೆರಿಕದ ಅಟಾರ್ನಿ ರಾಂಡಿ ಗ್ರಾಸ್ಮನ್ ಶುಕ್ರವಾರ ಹೇಳಿದ್ದಾರೆ.

ಬಿಟ್‌ಕಾಯಿನ್ ಬೆಲೆ ಕುರಿತ ತಪ್ಪು ಮಾಹಿತಿ, ಪರವಾನಗಿ ಪಡೆಯದೆ ಹಣ ರವಾನೆ ಮತ್ತು ಅಕ್ರಮವಾಗಿ ಅಂತರರಾಷ್ಟ್ರೀಯ ಹಣ ವರ್ಗಾವಣೆಯ ಸಂಚು ಆರೋಪವನ್ನು ಕುಂಭಾನಿ ಮೇಲೆ ಹೊರಿಸಲಾಗಿದೆ. ಈ ಮೂರು ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಗರಿಷ್ಠ 70 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT