ಭಾನುವಾರ, ಜೂನ್ 20, 2021
24 °C

ಅಮೆರಿಕ: ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಭಾರತೀಯನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೆನಡಾ ಮೂಲಕ ಅಮೆರಿಕಗೆ ಅಕ್ರಮವಾಗಿ ಒಳ ಪ್ರವೇಶಿಸಲು ಯತ್ನಿಸಿದ ಭಾರತೀಯ ಪ್ರಜೆಯನ್ನು ಅಲ್ಲಿನ ಗಡಿ ಗಸ್ತು ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ. 

ಕಳೆದ ವಾರ  ಮೊಂಟಾನಾದ ಸ್ವೀಟ್‌ಗ್ರಾಸ್‌ ಪೋರ್ಟ್‌ ಆಫ್‌ ಎಂಟ್ರಿಯ ಮೂಲಕ ಅಕ್ರಮವಾಗಿ ಒಳನುಸುಳಲು ಯತ್ನಿಸಿದ  ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತ ಭಾರತೀಯ ಪ್ರಜೆ ಎಂದು ಒಪ್ಪಿಕೊಂಡಿದ್ದು, ತಾನು ಉದ್ದೇಶಪೂರ್ವಕವಾಗಿ ಕೆನಡಾದಿಂದ ಅಮೆರಿಕ ಪ್ರವೇಶಿಸಿದ್ದೇನೆ ಎಂದು ಹೇಳಿದ್ದಾನೆ.

‘ಬಂಧಿತನ ಬಳಿ ಹಲವಾರು ಚೀಲಗಳಿದ್ದವು. ಆದರೆ ಇದರಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು