ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾದ ಹಲವಡೆ ಇಸ್ರೇಲ್‌ನಿಂದ ಇನ್ನಷ್ಟು ದಾಳಿ: ಹಮಸ್‌ ಮುಖಂಡರ ಮನೆಗಳೇ ಗುರಿ

Last Updated 17 ಮೇ 2021, 5:54 IST
ಅಕ್ಷರ ಗಾತ್ರ

ಗಾಜಾ: ಇಸ್ರೇಲ್ ಯುದ್ಧ ವಿಮಾನಗಳು ಸೋಮವಾರ ಮುಂಜಾನೆ ಗಾಜಾ ಪಟ್ಟಿಯ ವಿವಿಧೆಡೆ ಭಾರಿ ವೈಮಾನಿಕ ದಾಳಿ ನಡೆಸಿವೆ.ಆದರೆ ಯಾವುದೇ ಸಾವು ನೋವು ವರದಿಯಾಗಿಲ್ಲ.

ನಗರದ ಉತ್ತರದಿಂದ ದಕ್ಷಿಣದವರೆಗೆ 10 ನಿಮಿಷ ಕಾಲ ವ್ಯಾಪಕ ದಾಳಿ ನಡೆಸಲಾಗಿದೆ.

‘ನಾವು ಗಾಜಾ ‍ಪಟ್ಟಿಯಲ್ಲಿರುವ ಹಮಾಸ್‌ ಕಮಾಂಡರ್‌ಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆವು. ಆದರೆ ದಾಳಿಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ’ ಎಂದು ಇಸ್ರೇಲ್‌ ಸೇನೆಯು ಹೇಳಿದೆ.

‘ನಗರದ ಪಶ್ಚಿಮ ಭಾಗದಲ್ಲಿರುವ ಮುಖ್ಯ ಕರಾವಳಿ ರಸ್ತೆ, ತೆರೆದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಮುಂಜಾನೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ. ಆದರೆ ದಕ್ಷಿಣ ಗಾಜಾ ನಗರಕ್ಕೆ ವಿದ್ಯುತ್‌ ಪೂರೈಕೆ ಮಾಡುವ ಏಕೈಕ ವಿದ್ಯುತ್‌ ಸ್ಥಾವರವು ಹಾನಿಗೊಳಗಾಗಿದೆ ಎಂಬುದಾಗಿ ವಿದ್ಯುತ್‌ ವಿತರಣಾ ಕಂಪನಿ ಹೇಳಿದೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ದಾಳಿಯು ಅಗತ್ಯವಿರುವವರೆಗೂ ಮುಂದುವರೆಯಲಿದೆ. ಇದಕ್ಕೆ ಹಮಾಸ್‌ನ ಬಂಡುಕೋರರೇ ಕಾರಣ’ ಎಂದು ಸಂದರ್ಶನವೊಂದರಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಹೇಳಿದ್ದರು. ಇದರ ಬೆನ್ನಲ್ಲೇ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.

ಇದಕ್ಕೆ ಪ್ರತಿಯಾಗಿ ಹಮಾಸ್‌ ಬಂಡುಕೋರರು ಇಸ್ರೇಲ್‌ನ ಅಶ್ಕೆಲಾನ್‌ ನಗರ ಸೇರಿದಂತೆ ಇತರೆ ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ರಾಕೆಟ್‌ ದಾಳಿ ನಡೆಸಿದ್ದಾರೆ. ಈ ವೇಳೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕಳೆದ 24 ಗಂಟೆಗಳ ಹಿಂದೆ ನಡೆದ ವೈಮಾನಿಕ ದಾಳಿಯಲ್ಲಿ ಮೂರು ಕಟ್ಟಡಗಳು ನೆಲಸಮಗೊಂಡಿದ್ದು, 42 ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT