ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ನೇತೃತ್ವದ ಬಹುರಾಷ್ಟ್ರೀಯ ಯೋಜನೆಗೆ ವಿಶ್ವಸಂಸ್ಥೆ ಒಪ್ಪಿಗೆ

ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಈಡೇರಿಕೆಗೆ ಯೋಜನೆ ಸಹಕಾರಿ
Last Updated 24 ಜೂನ್ 2021, 6:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಪಗ್ರಹ ಆಧಾರಿತ ಕರಾವಳಿ ಪ್ರದೇಶದ ದತ್ತಾಂಶಗಳ ನಿಖರತೆ ಮತ್ತು ಭೂಮಿ ಆಧಾರಿತ ಅವಲೋಕನವನ್ನು ಸುಧಾರಿಸುವ ಭಾರತದ ಇಸ್ರೊ ಮತ್ತು ಅಮೆರಿಕದನ್ಯಾಷನಲ್‌ ಓಷಿಯಾನಿಕ್ ಅಂಡ್ ಅಟ್‌ಮಾಸ್ಪಿರಿಕ್‌ ಅಡ್ಮಿನಿಸ್ಟೇಷನ್‌ (ಎನ್‌ಒಎಎ) ಜಂಟಿಯಾಗಿ ರೂಪಿಸಿರುವ ಬಹುರಾಷ್ಟ್ರೀಯ ಯೋಜನೆಗೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.

ಈ ಯೋಜನೆಗೆ ‘ಕಮಿಟಿ ಆನ್ ಅರ್ಥ್ ಅಬ್ಸವೇಷನ್ ಸೆಟಲೈಟ್ಸ್‌– ಕೋಸ್ಟಲ್ ಅಬ್ಸರ್ವೇಷನ್ಸ್, ಅಪ್ಲಿಕೇಷನ್ಸ್, ಸರ್ವೀಸ್‌ ಅಂಡ್ ಟೂಲ್ಸ್‌ (ಸಿಇಒಎಸ್‌ ಸಿಒಎಎಸ್‌ಟಿ) ಎಂದು ಹೆಸರಿಸಲಾಗಿದೆ. ಈ ಯೋಜನೆಯ ಮೂಲಕ ವಿಶ್ವಸಂಸ್ಥೆ ಗೊತ್ತುಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೆಲವನ್ನು ಸಾಕಾರಗೊಳಿಸುವ ಉದ್ದೇಶವಿದೆ ಎಂದು ಎನ್‌ಒಎಎ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ವಿಪತ್ತು ತಂದೊಡ್ಡುವ ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ಖಂಡಾಂತರ ತೀರ ಪ್ರದೇಶಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಸಂಭವಿಸುವ ಅಪಾಯಗಳನ್ನು ತಪ್ಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.

‘ಈ ಯೋಜನೆಯಲ್ಲಿ, ಪ್ರವಾಹ, ಕರಾವಳಿ ಪರಿಸರದಲ್ಲಿ ಭೂಮಿಯ ಬಳಕೆ, ನೀರಿನ ಗುಣಮಟ್ಟ, ಭೂ ಕುಸಿತ ಸೇರಿದಂತೆ ಕಡಲಿನಿಂದ ಭೂಪ್ರದೇಶಕ್ಕೆ ಉಂಟಾಗುವ ಹಾನಿಯನ್ನು ಅಧ್ಯಯನ ಮಾಡುವುದು ಹಾಗೂ ಈ ಸಮಸ್ಯೆಗಳಿಗೆ ಈಗಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಸುಧಾರಿಸುವ ಕುರಿತು ಅಧ್ಯಯನ ನಡೆಸಲಾಗುತ್ತದೆ‘ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT