ಭಾನುವಾರ, ಅಕ್ಟೋಬರ್ 24, 2021
23 °C

ಉಪಗ್ರಹ ರಕ್ಷಣೆ, ಬಾಹ್ಯಾಕಾಶ ಕಣ್ಗಾವಲು: ವರ್ಷಾಂತ್ಯಕ್ಕೆ ಭಾರತ–ಅಮೆರಿಕ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮತ್ತು ಅಮೆರಿಕದ ಉಪಗ್ರಹಗಳನ್ನು ಪ್ರಾಕೃತಿಕ ಮತ್ತು ಮಾನವ ನಿರ್ಮಿತ ‘ಬೆದರಿಕೆ’ಯಿಂದ ರಕ್ಷಿಸಿಕೊಳ್ಳುವ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಬೆಂಗಳೂರಿನಲ್ಲಿರುವ ‘ನೇತ್ರ’ ಮತ್ತು ಕ್ಯಾಲಿಫೋರ್ನಿಯಾದ ವಾಂಡೆನ್ಬರ್ಗ್ ವಾಯುಪಡೆ ನೆಲೆಯ ಜೊತೆ ಸಹಭಾಗಿತ್ವ ಹೊಂದಲಿದೆ.

ಭಾರತ ಮತ್ತು ಅಮೆರಿಕ ವರ್ಷಾಂತ್ಯದ ವೇಳೆಗೆ ಈ ಒಪ್ಪಂದಕ್ಕೆ ಸಹಿ ಹಾಕಲಿವೆ. ಇದು, ಬಾಹ್ಯಾಕಾಶ ಚಟುವಟಿಕೆ ದೀರ್ಘಾವಧಿಯಲ್ಲಿ ಸುಸ್ಥಿರವಾಗಿಸಲು ದತ್ತಾಂಶ ಮತ್ತು ಸೇವೆಯನ್ನು ಪರಸ್ಪರ ವಿನಿಮಯಕ್ಕೆ ನೆರವಾಗಲಿದೆ.

ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಭೆಯ ನಂತರ ಶನಿವಾರ ಈ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಒಪ್ಪಂದರ ಅನುಸಾರ ಇಸ್ರೊದ, ಬೆಂಗಳೂರಿನಲ್ಲಿರುವ ‘ನೇತ್ರ’ ಸಂಸ್ಥೆಯು ವಾಂಡೆನ್ಬರ್ಗ್‌ನಲ್ಲಿನ ಸಂಯುಕ್ತ ಬಾಹ್ಯಾಕಾಶ ಕಾರ್ಯಾಚರಣೆ ಕೇಂದ್ರದಿಂದ (ಸಿಎಸ್‌ಪಿಒಸಿ) ಬಾಹ್ಯಾಕಾಶ ಕಕ್ಷೆಯಲ್ಲಿನ ಅಂಶಗಳು, ಹೊಸ ಉಪಗ್ರಹಗಳ ಉಡಾವಣೆಯ ವೇಳೆ ಎದುರಾಗಬಹುದಾದ ಸಂಭವನೀಯ ಬೆದರಿಕೆ ಕುರಿತು ಮಾಹಿತಿ ಪಡೆಯಲಿದೆ.

ಇಸ್ರೊ ಬೆಂಗಳೂರಿನ ಪೀಣ್ಯದಲ್ಲಿರುವ ತನ್ನ ಕ್ಯಾಂಪಸ್‌ನಲ್ಲಿ, ಬಾಹ್ಯಾಕಾಶ ಕಕ್ಷೆಯಲ್ಲಿರುವ ಮಾಹಿತಿಗಳ ಮಾಹಿತಿ ಸಂಗ್ರಹಕ್ಕಾಗಿ ‘ನೇತ್ರ’ (NETRA) ಸಂಸ್ಥೆಯನ್ನು ಸ್ಥಾಪಿಸಿದೆ.

ಅಮೆರಿಕದ ಜಂಟಿ ಬಾಹ್ಯಾಕಾಶ ಕಾರ್ಯಾಚರಣೆ ನಿರ್ವಹಣಾ ಕೇಂದ್ರವು (ಜೆಎಸ್‌ಪಿಒಸಿ), ಅಮೆರಿಕ ನೇತೃತ್ವದಲ್ಲಿ ಸಿಎಸ್‌ಪಿಒಸಿ ಸ್ಥಾಪಿಸಿದ್ದು, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ನ್ಯೂಜಿಲ್ಯಾಂಡ್‌ ಸಹಭಾಗಿತ್ವ ಹೊಂದಿದೆ. ಬಾಹ್ಯಾಕಾಶ ಕಣ್ಗಾವಲು ನೆಟ್‌ವರ್ಕ್‌ ಮೂಲಕ ಸಂಗ್ರಹಿಸಲಾದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಿದೆ.

ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿ ಮುಖ್ಯಸ್ಥರೂ ಆದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಉಭಯ ದೇಶಗಳ ನಡುವೆ ಬಾಹ್ಯಾಕಾಶ ಸಹಭಾಗಿತ್ವ ವಿಷಯ ಕುರಿತು ಚರ್ಚೆಯನ್ನು ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು