ಸೋಮವಾರ, ಆಗಸ್ಟ್ 15, 2022
23 °C

ಬೈಡನ್ ಕುಟುಂಬ ಅಮೆರಿಕವನ್ನು ಚೀನಾಕ್ಕೆ ಮಾರಾಟ ಮಾಡಲಿದೆ: ಟ್ರಂಪ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಗಾದಿಗಾಗಿ ನಡೆಯುತ್ತಿರುವ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ರಿಪಬ್ಲಿಕನ್ ಪಾರ್ಟಿ ಮತ್ತು ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿಗಳ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ.

ಗುರುವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಚೀನಾ ವಿಚಾರದಲ್ಲಿ ದುರ್ಬಲವಾಗಿರುವ ಬೈಡನ್ ಮತ್ತು ಅವರ ಕುಟುಂಬ, ಮುಂದಿನ ದಿನಗಳಲ್ಲಿ ಅಮೆರಿಕವನ್ನು ಚೀನಾ ಮಿಲಿಟರಿಗೆ ಮಾರಿಬಿಡುತ್ತಾರೆ‘ ಎಂದು ಹರಿಹಾಯ್ದಿದ್ದಾರೆ.

‘ಮಿಚಗನ್ ಆಟೊ ಬಿಡಿ ಭಾಗಗಳ ಉತ್ಪಾದಿಸುವ ಕಂಪನಿಯಲ್ಲಿ ಪಾಲು ಹೊಂದಿರುವ ಬೈಡನ್ ಪುತ್ರ ಹಂಟರ್ ಬೈಡನ್, ತನ್ನ ಷೇರನ್ನು ಚೀನಾದ ಪ್ರಮುಖ ಮಿಲಿಟರಿ ಗುತ್ತಿಗೆದಾರರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ'. ಎಂದು ಹೇಳಿದ್ದಾರೆ. ಹಂಟರ್ ಅವರು ಶಾಂಘೈ ಮೂಲದ ಬೊಹಾಯ್‌ ಆರ್‌ಎಸ್‌ಟಿ ಎಂಬ ಖಾಸಗಿ ಈಕ್ವಿಟಿ ಸಂಸ್ಥೆಯಲ್ಲಿ ಶೇ 10ರಷ್ಟು ಪಾಲನ್ನು ಹೊಂದಿದ್ದಾರೆ.

‘ಮಿಚಿಗನ್ ಕಂಪನಿಯ ವಹಿವಾಟಿನ ಬಗ್ಗೆ ನೀವ್ಯಾರೂ ವರದಿ ಮಾಡುತ್ತಿಲ್ಲ‘ ಎಂದು ಮಾಧ್ಯಮದವರ ವಿರುದ್ಧ ಆರೋಪಿಸಿದ ಟ್ರಂಪ್, ‘ನೀವು ಆ ವಿಷಯದ ಬಗ್ಗೆ ಬರೆಯಲು ಇಷ್ಟಪಡುವುದಿಲ್ಲ ಅಲ್ಲವೇ‘? ಎಂದು ಪ್ರಶ್ನಿಸಿದರು. ‘ಬೈಡನ್ ತನ್ನ ಇಡೀ ವೃತ್ತಿ ಜೀವನದಲ್ಲಿ ಮಿಚಿಗನ್ ಕಂಪನಿಯ ಉದ್ಯೋಗಗಳನ್ನು ಚೀನಾಕ್ಕೆ ಮಾರಿದ್ದಾರೆ‘ ಎಂದು ಟ್ರಂಪ್ ದೂರಿದರು.

‘ಈಗ ಬೈಡನ್‌ಗೆ ಕೆಲಸವಿಲ್ಲ. ಅವರ ಕುಟುಂಬವು ನಮ್ಮ ದೇಶವನ್ನು ನೇರವಾಗಿ ಚೀನಾ ಮಿಲಿಟರಿಗೆ ಮಾರಲು ಹೊರಟಿದೆ.  ಈ ಮೂಲಕ ಅಮೆರಿಕದ ಉದ್ಯೋಗಗಳೆಲ್ಲ ಚೀನಾಕ್ಕೆ ಸಿಗುವಂತಾಗಿದೆ. ಪ್ರತಿಯಾಗಿ ಬೈಡನ್‌ಗೆ ಆ ಉದ್ಯೋಗ ಮಾರಿದ ಲಾಭ ದೊರೆಯುತ್ತಿದೆ‘ ಎಂದು ಅವರು ಆರೋಪಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು