ಗುರುವಾರ , ಡಿಸೆಂಬರ್ 3, 2020
21 °C

ಗೆದ್ದೇ ಗೆಲ್ಲುವೆ, ತಾಳ್ಮೆಯಿಂದಿರಿ: ಜೋ ಬೈಡನ್‌

ಎಎಫ್‍ಪಿ Updated:

ಅಕ್ಷರ ಗಾತ್ರ : | |

Joe Biden

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಮತ ಎಣಿಕೆ ಶೀಘ್ರವೇ ಪೂರ್ಣಗೊಳ್ಳಲಿದ್ದು ಅಲ್ಲಿವೆರೆಗೂ ತಾಳ್ಮೆಯಿಂದಿರಿ ಎಂದು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ ಹೇಳಿದ್ದಾರೆ.

ವಿಲ್‌ಮಿಂಗ್ಟನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈಗಿನ ಪರಿಸ್ಥಿತಿಯ ಬಗ್ಗೆ ನಮಗೆ ಸಂತಸವಿದೆ. ಮತ ಎಣಿಕೆ ಪೂರ್ಣವಾದಾಗ ಕಮಲಾ ಹ್ಯಾರಿಸ್ ಮತ್ತು ನನ್ನನ್ನು ವಿಜಯಿ ಎಂದು ಘೋಷಿಸುತ್ತಾರೆ, ಅದರಲ್ಲಿ ಅನುಮಾನವಿಲ್ಲ’ ಎಂದು ಹೇಳಿದ್ದಾರೆ.

ಕೆಲವು ರಾಜ್ಯಗಳ ಮತ ಎಣಿಕೆ ಪೂರ್ಣಗೊಳ್ಳಲು ಬಾಕಿ ಇದ್ದು, ಈ ರಾಜ್ಯಗಳ ಫಲಿತಾಂಶವೇ ಗೆಲುವಿನಲ್ಲಿ ನಿರ್ಣಾಯಕ ಎನಿಸಲಿದೆ. ಈ ರಾಜ್ಯಗಳಲ್ಲಿ ಬೈಡನ್‌ ಅವರೇ ಗೆಲುವು ಸಾಧಿಸುವ ಸಾಧ್ಯೆತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: 

ಟ್ರಂಪ್ ಪರ, ವಿರುದ್ಧ ಪ್ರತಿಭಟನೆ: ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಆರೋಪಿಸಿದ್ದು, ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಕೆಲವೆಡೆ ಟ್ರಂಪ್‌ ಪರ ಮತ್ತು ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು