ಗುರುವಾರ , ಅಕ್ಟೋಬರ್ 21, 2021
22 °C

‘ಕಮಲಾ ಹ್ಯಾರಿಸ್‌–ಮೋದಿ ಭೇಟಿ ಭಾರತೀಯ ಅಮೆರಿಕನ್ನರ ಪಾಲಿಗೆ ಮಹತ್ವದ ಕ್ಷಣ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ, ಇಲ್ಲಿನ ಭಾರತೀಯ ಸಮುದಾಯಕ್ಕೆ ‘ಸ್ಥಿತ್ಯಂತರದ ಕ್ಷಣ’ವಾಗಿದೆ ಎಂದು ಲಾಸ್‌ ಏಂಜಲೀಸ್‌ ಟೈಮ್ಸ್‌ ದೈನಿಕ ಅಭಿಪ್ರಾಯಪಟ್ಟಿದೆ.

‘ಪ್ರಮುಖ ಮೈತ್ರಿ ದೇಶಗಳಲ್ಲೊಂದಾದ ಭಾರತದ ಪ್ರಧಾನಮಂತ್ರಿಯನ್ನು ಅಮೆರಿಕದ ಉಪಾಧ್ಯಕ್ಷೆ ಸ್ಥಾನಕ್ಕೇರಿರುವ ಭಾರತೀಯ–ಅಮೆರಿಕನ್‌ ಭೇಟಿಯಾಗುತ್ತಿದ್ದಾರೆ’ ಎಂದು ಪತ್ರಿಕೆ ಹೇಳಿದೆ.

‘ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ 40 ಲಕ್ಷಕ್ಕೂ ಅಧಿಕ. ಕಮಲಾ ಹ್ಯಾರಿಸ್‌ ಹಾಗೂ ನರೇಂದ್ರ ಮೋದಿ ಅವರ ಭೇಟಿ ನಮ್ಮ ಪಾಲಿಗೆ ಮಹತ್ವದ ಕ್ಷಣ. ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಕಾರ್ನಿಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್ ಪೀಸ್‌ ಸಂಘಟನೆಯ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಮಿಲನ್‌ ವೈಷ್ಣವ್‌ ಹೇಳಿದರು.

ಕಮಲಾ ಹ್ಯಾರಿಸ್‌ ಅವರು ಮೋದಿ ಅವರೊಂದಿಗೆ ಜೂನ್‌ 3ರಂದು ದೂರವಾಣಿ ಮೂಲಕ ಮಾತನಾಡಿದ್ದರು. ಅವರು ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು