ಟೊಕಿಯೊ: ದಕ್ಷಿಣ ಜಪಾನ್‌ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಪತ್ತಿನ ಸಂಕೇತಗಳನ್ನು ರವಾನಿಸಿರುವ ಹಡಗಿನ (ಜಾನುವಾರು ಸಾಗಿಸುತ್ತಿದ್ದ) ಪತ್ತೆಗಾಗಿ ಜಪಾನಿನ ವಿಪತ್ತು ನಿರ್ವಹಣಾ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ.

11,947 ಟನ್ ತೂಕದ ಗಲ್ಫ್ ಜಾನುವಾರು ಸಾಗಾಟ–1 ಹಡಗು 5,800 ದನಗಳನ್ನು ಪೂರ್ವ ಚೀನಾ ಸಮುದ್ರದ ಮೂಲಕ ಪಶ್ಚಿಮದಲ್ಲಿರುವ ಅಮಾಮಿ ಒಶಿಮಾದ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಸಾಗಿಸುತ್ತಿದ್ದಾಗ ಅಪಾಯದ ಸೂಚನೆಯ ಸಂಕೇತಗಳನ್ನು ಕಳಿಸಿದೆ.

ಈ ನಡುವೆ ಬುಧವಾರಕರಾವಳಿ ಭದ್ರತಾ ಪಡೆಯವರು ಫಿಲಿಪಿನೊ ಎಂಬ ನೌಕಾ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಜಪಾನ್‌ನ ನೌಕಾಪಡೆ ಪಿ–3ಸಿ ಸರ್ವೇಲೆನ್ಸ್ ವಿಮಾನದ ಸಿಬ್ಬಂದಿಯು, ಜೀವರಕ್ಷಕ ಕವಚವನ್ನು ತೊಟ್ಟ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗೇಳುತ್ತಾ ಬೊಬ್ಬೆ ಹೊಡೆಯುತ್ತಿದ್ದನ್ನು ಗುರುತಿಸಿದ್ದಾರೆ.

ಈ ಹಡಗಿನಿಂದ ಅಪಾಯದ ಸಂಕೇತ ರವಾನೆಯಾಗಿರುವುದರ ಕಾರಣ ತಿಳಿದು ಬಂದಿಲ್ಲ. ಆದರೆ, ಮಯಾಸಾಕ್ ಚಂಡಮಾರುತದಿಂದ ಉಂಟಾಗಿದ್ದ ಪ್ರತಿಕೂಲ ಹವಾಮಾನ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.