ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕವಾಗಿ ಟ್ರಾಫಿಕ್ ಸಮಸ್ಯೆ ನೀಗಿಸಿದ 2020 ಲಾಕ್‌ಡೌನ್!

Last Updated 13 ಜನವರಿ 2021, 4:37 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಕೋವಿಡ್ 19 ಹಾವಳಿಯಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಭಾರತ ಮಾತ್ರವಲ್ಲದೆ, ಜಾಗತಿಕವಾಗಿ ವಿವಿಧ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಸರಕಾರ ಹಲವು ನಿರ್ಬಂಧಗಳನ್ನು ಹೇರಿದ್ದರಿಂದ ಸಹಜವಾಗಿ ವಿವಿಧ ಬದಲಾವಣೆಗಳನ್ನು ಕಂಡಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ಸಮಸ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.

ಬೆಂಗಳೂರಿನಲ್ಲೂ ಟ್ರಾಫಿಕ್ ಇಲ್ಲ!

ಸದಾ ವಾಹನಗಳಿಂದ ಗಿಜಿಗುಡುವ ಬೆಂಗಳೂರಿನ ರಸ್ತೆಗಳು ಕೂಡ ಟ್ರಾಫಿಕ್ ಮುಕ್ತವಾಗಿದ್ದವು ಎಂದು ಲೊಕೇಶನ್ ಟೆಕ್ನಾಲಜಿ ಕಂಪನಿ ಟಾಮ್‌ಟಾಮ್ ಹೇಳಿದೆ. ಲಾಸ್ ಏಂಜಲೀಸ್, ಮೆಕ್ಸಿಕೋ ನಗರಗಳಲ್ಲಿ ಕೂಡ 2020ರಲ್ಲಿ ಅತಿ ಕಡಿಮೆ ಟ್ರಾಫಿಕ್ ದಾಖಲಾಗಿದೆ. ಈ ಮೂರು ಪ್ರಮುಖ ನಗರಗಳಲ್ಲಿ ಗರಿಷ್ಠ ಟ್ರಾಫಿಕ್ ಸಮಸ್ಯೆಯಿದ್ದು, ಲಾಕ್‌ಡೌನ್ ಅವಧಿಯಲ್ಲಿ ಟ್ರಾಫಿಕ್ ಕುಸಿತವಾಗಿದೆ ಎನ್ನಲಾಗಿದೆ.

ಟಾಮ್‌ಟಾಮ್‌ನ ಹಿರಿಯ ಟ್ರಾಫಿಕ್ ಅಧಿಕಾರಿ ನಿಕ್ ಕಾನ್ ಹೇಳಿಕೆ ಪ್ರಕಾರ, ಈ ವರ್ಷವೂ ಲಾಕ್‌ಡೌನ್ ಪರಿಸ್ಥಿತಿ ಮುಂದುವರಿಯಲಿದ್ದು, ಮತ್ತೆ ಎಲ್ಲವೂ ಸುಧಾರಿಸಲು ಸಮಯ ಬೇಕಾಗಬಹುದು ಎಂದಿದ್ದಾರೆ.

ಟಾಮ್‌ಟಾಮ್ 57 ರಾಷ್ಟ್ರಗಳಲ್ಲಿ 416 ನಗರಗಳಲ್ಲಿನ ಟ್ರಾಫಿಕ್ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ತಯಾರಿಸಿದೆ. 2019ರಲ್ಲಿ ಬೆಂಗಳೂರು ಗರಿಷ್ಠ ಟ್ರಾಫಿಕ್ ದಟ್ಟಣೆ ಹೊಂದಿರುವ ನಗರವಾಗಿತ್ತು. ಆಧರೆ 2020ರಲ್ಲಿ ಅದು ಶೇ 30 ಇಳಿಕೆಯೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಲಾಕ್‌ಡೌನ್ ಕಾರಣವಾಗಿದೆ. ಅಲ್ಲದೆ, ಮಾಸ್ಕೋ, ಅಮೆರಿಕ, ಕೆನಡಾ, ಲಂಡನ್, ಪ್ಯಾರಿಸ್ ಮತ್ತು ಮೆಕ್ಸಿಕೋ ನಗರಗಳಲ್ಲೂ ಟ್ರಾಫಿಕ್ ದಟ್ಟಣೆಯಿದ್ದರೂ, ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT