ಸೋಮವಾರ, ಸೆಪ್ಟೆಂಬರ್ 20, 2021
22 °C

ಮಲೇಷ್ಯಾ: ಬಹುಮತ ಕಳೆದುಕೊಂಡ ಪ್ರಧಾನಿ ರಾಜೀನಾಮೆಗೆ ನಿರ್ಧಾರ

ಎಪಿ Updated:

ಅಕ್ಷರ ಗಾತ್ರ : | |

ಕೌಲಾಲಂಪುರ್: ಬಹುಮತ ಸಾಬೀತಿಗೆ ಬೆಂಬಲ ಪಡೆಯುವಲ್ಲಿ ವಿಫಲವಾಗಿರುವ ಮಲೇಷ್ಯಾದ ಪ್ರಧಾನಿ ಮುಹಿದ್ದೀನ್‌ ಯಾಸೀನ್‌ ರಾಜೀನಾಮೆ ನೀಡಲು ಭಾನುವಾರ ನಿರ್ಧರಿಸಿದ್ದಾರೆ.

ಮುಹಿದ್ದೀನ್‌ ನೇತೃತ್ವದ ಮೈತ್ರಿಕೂಟದ ಆಡಳಿತದಲ್ಲಿ ಅತಿದೊಡ್ಡ ಪಕ್ಷವಾಗಿದ್ದ ಯುಎಂಎನ್‌ಒ ಪಕ್ಷ ಬೆಂಬಲವನ್ನು ಹಿಂದಕ್ಕೆ ಪಡೆದಿದೆ. ಈ ಪಕ್ಷದ ಇಬ್ಬರು ಸದಸ್ಯರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಮುಹಿದ್ದೀನ್‌ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ವಿರೋಧ ಪಕ್ಷಗಳ ಬೆಂಬಲ ಪಡೆಯುವ ಪ್ರಯತ್ನ ಸಹ ವಿಫಲವಾಗಿದ್ದರಿಂದ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.

‘ಸೋಮವಾರ ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಸಭೆಯ ನಂತರ ಮುಹಿದ್ದೀನ್‌ ಅವರು ಅರಮನೆಗೆ ತೆರಳಿ ಮಲೇಷ್ಯಾ ರಾಜನಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ’ ಎಂದು ಪ್ರಧಾನಮಂತ್ರಿ ಕಚೇರಿಯ ಸಚಿವ ಮೊಹಮ್ಮದ್‌ ರೆಜುವಾನ್‌ ಮೊಹಮ್ಮದ್‌ ಯೂಸುಫ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು