ಸೋಮವಾರ, ಆಗಸ್ಟ್ 8, 2022
24 °C

ಚೋಕ್ಸಿ ʼಅಪಹರಣʼ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ಆಂಟಿಗುವಾ ವಿರೋಧ ಪಕ್ಷ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸೆಂಟ್‌ ಜಾನ್ಸ್‌ (ಆಂಟಿಗುವಾ): ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರ ʼಅಪಹರಣವುʼ ಅಂತರರಾಷ್ಟ್ರೀಯ ಅಪರಾಧವಾಗಿದ್ದು, ಇದರಿಂದ ಆಂಟಿಗುವಾ ಮತ್ತು ಬಾರ್ಬುಡಾಗೆ ಅಪಮಾನವಾಗಿದೆ ಎಂದು ಆಂಟಿಗುವಾ ಸಂಸತ್‌ನ ಪ್ರಮುಖ ವಿರೋಧ ಪಕ್ಷ ಯುನೈಟೆಡ್‌ ಪ್ರೊಗ್ರೆಸ್ಸಿವ್‌ ಪಾರ್ಟಿ (ಯುಪಿಪಿ) ನಾಯಕ ಕಿಡಿ ಕಾರಿದ್ದಾರೆ.

ʼಚೋಕ್ಸಿ ಅಪಹರಣವು ಅಂತರರಾಷ್ಟ್ರೀಯ ಅಪರಾಧವಾಗಿದ್ದು, ಅದು ಆಂಟಿಗುವಾ ಮತ್ತು ಬಾರ್ಬುಡಾಗೆ ಅಪಮಾನ ತಂದಿದೆʼ ಎಂದು  ವರ್ಚುವಲ್‌ ಸಭೆ ವೇಳೆ ಯುಪಿಪಿಯ ಹರಾಲ್ಡ್‌ ಲೊವೆಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೋಕ್ಸಿ ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾ ದ್ವೀಪದಿಂದ ಅಪಹರಿಸಲಾಗಿದೆ ಎಂದು ʼಆಂಟಿಗುವಾ ನ್ಯೂಸ್‌ರೂಂʼ ಮಾಡಿರುವ ವರದಿಯನ್ನು ಉಲ್ಲೇಖಿಸಿರುವ ಲೊವೆಲ್‌, ಆಂಟಿಗುವಾ ಸರ್ಕಾರವು ಪ್ರಕರಣದಲ್ಲಿ ಸಹ ಅಪರಾಧಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚೋಕ್ಸಿ ಅವರನ್ನು ಆಂಟಿಗುವಾದಿಂದ ಡೊಮಿನಿಕಾಗೆ ಕರೆದೊಯ್ಯುವ ಕಾರ್ಯಾಚರಣೆಯಲ್ಲಿ ಭಾರತ ಮೂಲದವರೂ ಭಾಗಿಯಾಗಿದ್ದಾರೆ ಎಂಬುದನ್ನು ಬಿಂಬಿಸಿ ಕೆಲವು ಚಿತ್ರಗಳು ಮತ್ತು ವಿಡಿಯೊಗಳನ್ನು ಚೋಕ್ಸಿಯ ಕಾನೂನು ತಂಡವು ಬಿಡುಗಡೆ ಮಾಡಿದೆ ಎಂದೂ ʼಆಂಟಿಗುವಾ ನ್ಯೂಸ್‌ ರೂಂʼ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮೇ 23ರಿಂದ ನಾಪತ್ತೆಯಾಗಿದ್ದ ಚೋಕ್ಸಿ, ಬಳಿಕ ಡೊಮಿನಿಕಾದಲ್ಲಿ ಸೆರೆಸಿಕ್ಕಿದ್ದರು. ಭಾರತಕ್ಕೆ ಹಸ್ತಾಂತರಿಸುವ ಸಂಭಾವ್ಯತೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಪರಾರಿಯಾದ ಆರೋಪದ ಮೇಲೆ ಚೋಕ್ಸಿ ವಿರುದ್ಧ ʼಅಕ್ರಮ ಪ್ರವೇಶʼ ಆರೋಪದಡಿ ಡೊಮಿನಿಕಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಬಹುಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೋಕ್ಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು







ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು