ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋ ಬೈಡನ್‌ ಜತೆ ವಲಸೆ ಕಾರ್ಮಿಕರ ಯೋಜನೆ ಬಗ್ಗೆ ಚರ್ಚೆ:ಆ್ಯಂಡ್ರೆಸ್

Last Updated 28 ಫೆಬ್ರುವರಿ 2021, 8:21 IST
ಅಕ್ಷರ ಗಾತ್ರ

ಮೆಕ್ಸಿಕೊ: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಸೋಮವಾರ ನಡೆಸಲಿರುವ ವಿಡಿಯೊ ಸಂವಾದದ ವೇಳೆ ‘ಬ್ರಸೆರೊ’ ಮಾದರಿಯ ವಲಸೆ ಕಾರ್ಮಿಕರ ಯೋಜನೆ ಬಗ್ಗೆ ಚರ್ಚೆ ನಡೆಸುವುದಾಗಿ ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನ್ಯುಯೆಲ್‌ ಲೋಪೆಜ್ ಒಬ್ರೆಡರ್ ತಿಳಿಸಿದ್ದಾರೆ.

‘ಎರಡನೇ ವಿಶ್ವಯುದ್ಧ ಮತ್ತು ಅದರ ನಂತರ ದಿನಗಳಲ್ಲಿ ಅಮೆರಿಕದಲ್ಲಿ ಕಾರ್ಮಿಕರ ಕೊರತೆ ಉಂಟಾಗಿತ್ತು. ಈ ಸಮಯದಲ್ಲಿ ’ಬ್ರಸೆರೊ’ ಯೋಜನೆಯಡಿ ಮೆಕ್ಸಿಕನ್ನರಿಗೆ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಲು ಅನುವು ಮಾಡಲಾಗಿತ್ತು. ಅದೇ ರೀತಿ ಈಗಲೂ ಅಮೆರಿಕದ ಆರ್ಥಿಕತೆಗೆ ನಮ್ಮ ಯುವ ಶಕ್ತಿಯ ಅವಶ್ಯಕತೆಯಿದೆ’ ಎಂದು ಒಬ್ರೆಡರ್ ಅವರು ಹೇಳಿದರು.

‘ಪ್ರತಿ ವರ್ಷಅಮೆರಿಕದಲ್ಲಿ 6ರಿಂದ 8 ಲಕ್ಷ ಮೆಕ್ಸಿಕನ್‌ ವಲಸೆ ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ವಲಸೆ ಕಾರ್ಮಿಕರಿಗಾಗಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ಹಾಗಾಗಿ ಈ ಬಗ್ಗೆ ಜೋ ಬೈಡನ್‌ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT