ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಡೋಸೇಜ್ ಚೀನಾ 'ಕೋವಿಡ್' ಲಸಿಕೆ

ಜಕಾರ್ತಾ: ಚೀನಾ ಮೂಲದ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿ ಸಿರುವ ‘ಕೋವಿಡ್ 19‘ ಲಸಿಕೆಯ 12 ದಶಲಕ್ಷ ಡೋಸ್‌ಗಳು ಭಾನುವಾರ ಇಂಡೋನೇಷ್ಯಾ ತಲುಪಿವೆ ಎಂದು ಅಧ್ಯಕ್ಷ ಜೊಕೊ ವಿಡೋಡೊ ತಿಳಿಸಿದ್ದಾರೆ.
ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಇನ್ನೂ 18 ಲಕ್ಷ ಡೋಸ್ ಲಸಿಕೆ ಜನವರಿ ಆರಂಭದಲ್ಲಿ ಬರುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.
‘ಲಸಿಕೆ ಲಭ್ಯವಾಗಿರುವುದರಿಂದ ದೇಶದಲ್ಲಿ ರೋಗ ಹರಡುವಿಕೆಯನ್ನು ತಕ್ಷಣ ತಡೆಯಬಹುದಾಗಿದೆ‘ ಎಂದು ಜೊಕೊ ಹೇಳಿದ್ದಾರೆ.
‘ಸಿನೋವಾಕ್ ಸೇರಿದಂತೆ ಇನ್ನೂ ಕೆಲವು ಕಂಪನಿಗಳಿಂದ ಕಚ್ಚಾ ರೂಪದ ಲಸಿಕೆಯನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಔಷಧೀಯ ಕಂಪನಿ ಪಿಟಿ ಬಯೋ ಫಾರ್ಮ್, ಕಚ್ಚಾ ರೂಪದ ಲಸಿಕೆಯನ್ನು ಮತ್ತಷ್ಟು ಸಂಸ್ಕರಿಸಲಿದೆ‘ ಎಂದು ಹೇಳಿದರು.
ದೇಶದಲ್ಲಿ ಸಾಮೂಹಿಕ ಲಸಿಕೆ ವಿತರಣೆ ಪ್ರಕ್ರಿಯೆ ಪ್ರಾರಂಭಿಸಲು ರಾಷ್ಟ್ರೀಯ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರದಿಂದ ‘ತುರ್ತು ಬಳಕೆಯ ದೃಢೀಕರಣ'ದ ಅನುಮತಿಯ ಅಗತ್ಯವಿದೆ ಎಂದು ವಿಡೋಡೊ ಹೇಳಿದರು.
ಇಂಡೋನೇಷ್ಯಾ ಈಗಾಗಲೇ ಸಿನೊವಾಕ್ ಸಂಸ್ಥೆಯೊಂದಿಗೆ ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ಸಹಕರಿಸುತ್ತಿದೆ. ಆಗಸ್ಟ್‌ನಿಂದ ಪಶ್ಚಿಮ ಜಾವಾದ ಬಂಡುಂಗ್ ನಗರದಲ್ಲಿ 1,620 ಸ್ವಯಂಸೇವಕರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ. ಚೀನಾದ ಇತರ ಔಷಧ ತಯಾರಕರಾದ ಸಿನೊಫಾರ್ಮ್ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್‌ನ ಸಹಭಾಗಿತ್ವವನ್ನು ಸರ್ಕಾರ ಪರಿಶೀಲಿಸಿದೆ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.