ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಕೀವ್‌, ಲೀವ್‌ ಮೇಲೆ ರಷ್ಯಾದ ಕ್ಷಿಪಣಿಗಳ ದಾಳಿ

Last Updated 18 ಏಪ್ರಿಲ್ 2022, 7:13 IST
ಅಕ್ಷರ ಗಾತ್ರ

ಲೀವ್‌: ಉಕ್ರೇನ್‌ನ ಲೀವ್‌ ಮತ್ತು ನೀಪ್ರೊಪೆಟ್ರೋವಸ್ಕ್‌ ಪ್ರದೇಶಗಳ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಸೋಮವಾರ ಹಲವು ಕಡೆ ಕ್ಷಿಪಣಿ ದಾಳಿ ನಡೆದಿವೆ. ಕೀವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿರುವುದಾಗಿ ‌ವರದಿಯಾಗಿದೆ.

ಲೀವ್‌ನ ಮೇಯರ್‌ ಆ್ಯಂಡ್ರಿ ಸಡೋವಿ ಪ್ರಕಾರ, ನಗರದ ಮೇಲೆ ರಷ್ಯಾದ ಐದು ಕ್ಷಿಪಣಿಗಳು ಅಪ್ಪಳಿಸಿವೆ. ದಾಳಿಯ ಪರಿಣಾಮ ಪ್ರಾಣ ಹಾನಿಯಾಗಿರುವ ಬಗ್ಗೆ ತಿಳಿದು ಬಂದಿಲ್ಲ.

ನೀಪ್ರೊ ನದಿಯ ಎಡ ದಂಡೆಯಲ್ಲಿ ಸರಣಿ ಸ್ಫೋಟಗಳು ಆಗಿವೆ. ನೀಪ್ರೊಪೆಟ್ರೋವಸ್ಕ್‌ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಫೆಬ್ರುವರಿ 24ರಂದು ರಷ್ಯಾ ವಿಶೇಷ ಸೇನಾ ಕಾರ್ಯಾಚರಣೆಯ ಹೆಸರಿನಲ್ಲಿ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ್ದು, ಇಂದಿಗೂ ಹಲವು ಭಾಗಗಳಲ್ಲಿ ದಾಳಿ ಮುಂದುವರಿದಿದೆ.

ರಷ್ಯಾದ ಸಮರ ನೌಕೆ 'ಮಾಸ್ಕವಾ' ಮುಳುಗಿದ ನಂತರ ಪ್ರತೀಕಾರಕ್ಕಾಗಿ ಕೀವ್ ಮತ್ತು ಮೈಕೊಲೈವ್‌ ನಗರಗಳ ಸುತ್ತಮುತ್ತಲಿನ ಸೇನಾ ನೆಲೆಗಳು ಮತ್ತು ಸೇನಾ ಸಾಧನಗಳ ಕಾರ್ಖಾನೆಗಳನ್ನೇ ಗುರಿಯಾಗಿಸಿ ರಷ್ಯಾ ಕ್ಷಿಪಣಿಗಳ ದಾಳಿ ನಡೆಸಿದೆ. ಉಕ್ರೇನ್‌ನ ದೊಡ್ಡ ನಗರಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ.

ಭಾನುವಾರದ ವರೆಗೂ ಉಕ್ರೇನ್ ಸೇನೆ, ಯೋಧರು ಮತ್ತು ಬಾಡಿಗೆ ಸೈನಿಕರು ಸೇರಿ 23,367 ಸಿಬ್ಬಂದಿಯನ್ನು ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT