ಮಾಡರ್ನಾ ಲಸಿಕೆ ಶೇ. 94.1ರಷ್ಟು ಪರಿಣಾಮಕಾರಿ; ಮುಂದಿನ ವಾರ ಬಿಡುಗಡೆಗೆ ಸಿದ್ಧತೆ
ನ್ಯೂಯಾರ್ಕ್: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ಸಿದ್ಧತೆಯು ಭರದಿಂದ ಸಾಗುತ್ತಿದೆ. ಈ ಮಧ್ಯೆ ಮಾಡರ್ನಾದ ಕೋವಿಡ್ 19 ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಣ ಘಟಕ ಎಫ್ಡಿಎ ಮಂಗಳವಾರ ತಿಳಿಸಿದೆ.
ಇದಕ್ಕೆ ಮುಂದಿನ ದಿನಗಳಲ್ಲಿ ತುರ್ತು ಅನುಮೋದನೆ ಸಿಗಲಿದ್ದು, ಮುಂದಿನ ವಾರದಲ್ಲಿ ಹೊರಬರಲು ಸಿದ್ಧವಾಗಿದೆ ಎಂಬುದು ಉತ್ತಮ ಸಂಕೇತವಾಗಿದೆ ಎಂದು ತಿಳಿಸಿದೆ.
ತುರ್ತು ಬಳಕೆಗೆ ಅನುಮೋದನೆ ನೀಡದಿರಲು ನಿರ್ದಿಷ್ಟ ಕಾರಣಗಳಿಲ್ಲ. ಒಟ್ಟಾರೆ ಮಾಡರ್ನಾ ಲಸಿಕೆಯು ಶೇಕಡಾ 94.1ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಣ ಘಟಕ ಎಫ್ಡಿಎ ತಿಳಿಸಿದೆ.
ಇದನ್ನೂ ಓದಿ: 3 ಹಂತದಲ್ಲಿ ಕೋವಿಡ್–19 ಲಸಿಕೆ ಅಭಿಯಾನ ಘೋಷಿಸಿದ ಸೌದಿ
ಫೈಜರ್-ಬಯೋಟೆಕ್ ಲಸಿಕೆಯ ವಿತರಣೆಯು ಸೋಮವಾರದಿಂದ ಪ್ರಾರಂಭವಾಗಿದೆ. ಈಗ ಎಫ್ಡಿಎ ಗ್ರೀನ್ ಸಿಗ್ನಲ್ ನೀಡಿದರೆ ಮಾಡರ್ನಾದ ಆರು ದಶಲಕ್ಷ ಡೋಸ್ಗಳ ವಿತರಣೆಯು ಮುಂದಿನ ವಾರದಿಂದ ಪ್ರಾರಂಭವಾಗಲಿದೆ.
2.5 ಬಿಲಿಯನ್ ಫೆಡರಲ್ ನಿಧಿಯಲ್ಲಿ ಜನವರಿ ತಿಂಗಳಿನಿಂದ ಮಾಡರ್ನಾ ಲಸಿಕೆ ತಯಾರಿಸುವ ಕೆಲಸವನ್ನು ಪ್ರಾರಂಭಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.