ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಮತ್ತೊಂದು ಲಸಿಕೆಗೆ ಅನುಮತಿ: 1.7 ಕೋಟಿ ಡೋಸ್‌ ಖರೀದಿಗೆ ಒಪ್ಪಂದ

Last Updated 8 ಜನವರಿ 2021, 13:35 IST
ಅಕ್ಷರ ಗಾತ್ರ

ಲಂಡನ್: ಮಾಡರ್ನಾ ಕೋವಿಡ್–19 ಲಸಿಕೆ ಬಳಕೆಗೆ ಬ್ರಿಟನ್‌ನ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಹೆಚ್ಚುವರಿಯಾಗಿ ಒಂದು ಕೋಟಿ ಡೋಸ್‌ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿಯೂ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ಬ್ರಿಟನ್‌ನಲ್ಲಿ ಒಟ್ಟು ಮೂರು ಲಸಿಕೆಗಳ ಬಳಕೆಗೆ ಅನುಮತಿ ನೀಡಿದಂತಾಗಿದೆ. ಫೈಜರ್–ಬಯೋಎನ್‌ಟೆಕ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳ ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ.

ಬ್ರಿಟನ್‌ ಈಗಾಗಲೇ ಮಾಡರ್ನಾ ಲಸಿಕೆಯ 1.7 ಕೋಟಿ ಡೋಸ್‌ ಖರೀದಿಗೆ ಬ್ರಿಟನ್‌ ಒಪ್ಪಂದ ಮಾಡಿಕೊಂಡಿದೆ. ಮಾಡರ್ನಾ ಕಂಪನಿಯು ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿದ ಕೂಡಲೇ ಬ್ರಿಟನ್‌ಗೆ ಲಸಿಕೆ ಪೂರೈಕೆ ಆರಂಭಿಸಲಿದೆ.

‘ನಾವು ಈಗಾಗಲೇ ಬ್ರಿಟನ್‌ನಾದ್ಯಂತ 1.5 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಮಾಡರ್ನಾ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಲಸಿಕೆ ನೀಡಿಕೆ ಯೋಜನೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.

ಮಸಾಚುಸೆಟ್ಸ್‌ ಮೂಲದ ಮಾಡರ್ನಾ ಬಯೋಟೆಕ್‌ ಕಂಪನಿಯು ಅಭಿವೃದ್ಧಿ ಪಡಿಸಿರುವ ಕೋವಿಡ್‌–19 ಲಸಿಕೆಯು ಶೇ 94.5ರಷ್ಟು ಪರಿಣಾಮಕಾರಿ ಎಂಬುದು ಮೂರನೇ ಹಂತದ ಪ್ರಯೋಗಗಳ ಅಧ್ಯಯಗಳಲ್ಲಿ ಕಂಡುಬಂದಿತ್ತು.

ಅಮೆರಿಕ, ಕೆನಡಾ ಹಾಗೂ ಯುರೋಪ್ ಒಕ್ಕೂಟ ರಾಷ್ಟ್ರಗಳಲ್ಲಿ ಈಗಾಗಲೇ ಮಾಡರ್ನಾ ಲಸಿಕೆ ಬಳಕೆಗೆ ಅನುಮತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT