ಸೋಮವಾರ, ಜುಲೈ 4, 2022
21 °C

ಮ್ಯಾನ್ಮಾರ್‌: ಇಬ್ಬರು ರಾಜಕೀಯ ಕಾರ್ಯಕರ್ತರಿಗೆ ಮರಣದಂಡನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ನಲ್ಲಿ ಇಬ್ಬರು ಪ್ರಮುಖ ರಾಜಕೀಯ ಕಾರ್ಯಕರ್ತರಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಸೇನಾ ಟೆಲಿವಿಷನ್‌ ವರದಿ ಮಾಡಿದೆ. 

ಕೊ ಜಿಮ್ಮಿ ಎಂದು ಗುರುತಿಸಲಾಗುವ ಕ್ಯಾವ್‌ ಮಿನ್‌ ಯು ಮತ್ತು ಮೌಂಗ್‌ ಕ್ಯಾವ್ ಎಂದು ಕರೆಯುವ ಪ್ಯೋ ಜೆಯಾರ್‌ ಥಾವ್‌ ಅವರಿಗೆ ದೇಶದ ಭಯೋತ್ಪಾದಕ ನಿಗ್ರಹ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಾಗಿದೆ ಎಂದು ಮ್ಯಾವಡ್ಡಿ ಟಿವಿ ತಿಳಿಸಿದೆ.

ಇಬ್ಬರನ್ನೂ ಸ್ಫೋಟಕಗಳು, ಬಾಂಬ್‌ಗಳ ಬಳಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಮಿಲಿಟರಿ ನ್ಯಾಯಾಲಯದಲ್ಲಿ ತೀರ್ಮಾನಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು