ಶುಕ್ರವಾರ, ಜನವರಿ 21, 2022
30 °C

ಮ್ಯಾನ್ಮಾರ್‌: ಅಮೆರಿಕದ ಪತ್ರಕರ್ತನಿಗೆ 11 ವರ್ಷ ಜೈಲು ಶಿಕ್ಷೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಅಮೆರಿಕದ ಪತ್ರಕರ್ತ ಡ್ಯಾನಿ ಫೆನ್‌ಸ್ಟರ್‌ ಅವರಿಗೆ ಇಲ್ಲಿನ ನ್ಯಾಯಾಲಯವು 11 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಸುಳ್ಳು ಮತ್ತು ಪ್ರಚೋದಕನಕಾರಿ ಮಾಹಿತಿ ಹಂಚಿಕೆ ಸೇರಿದಂತೆ ಅವರ ವಿರುದ್ಧ ಹೊರಿಸಲಾಗಿದ್ದ ವಿವಿಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಲಯ ಫೆನ್‌ಸ್ಟರ್ ಅವರನ್ನು ಅಪರಾಧಿ ಎಂದು ಘೋಷಿಸಿತು.

ಇವರು ಫ್ರಂಟಿಯರ್ ಮ್ಯಾನ್ಮಾರ್ ಆನ್‌ಲೈನ್‌ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕ. ‘ವೀಸಾ ನಿಯಮಗಳ ಉಲ್ಲಂಘನೆ, ಕಾನೂನುಬಾಹಿರ ಸಂಘಟನೆಗಳ ಜೊತೆಗೆ ಸಂಪರ್ಕ ಆರೋಪಗಳು ದೃಢಪಟ್ಟಿವೆ’ ಎಂದು ವಕೀಲ ಥಾನ್ ಜಾವ್ ಆಂಗ್‌ ತಿಳಿಸಿದರು. 

ಮ್ಯಾನ್ಮಾರ್‌ ಸರ್ಕಾರ ಮೇ ತಿಂಗಳಲ್ಲಿ ಅವರನ್ನು ಬಂಧಿಸಿತ್ತು. ಅವರು ವಿರುದ್ಧ ದೇಶದ್ರೋಹ ಮತ್ತು ಭಯೋತ್ಪಾದನೆ ಕೃತ್ಯ ನಡೆಸಿದ ಇನ್ನೂ ಎರಡು ಆರೋಪಗಳು ಇದ್ದು, ವಿಚಾರಣೆ ನಡೆದಿದೆ.  

ಕುಟುಂಬ ಸದಸ್ಯರ ಭೇಟಿಗೆ ಮೇ 24ರಂದು ಅಮೆರಿಕದ ಡೆಟ್ರಾಯಿಟ್‌ಗೆ ತೆರಳಲು ಸಜ್ಜಾಗುತ್ತಿದ್ದಾಗ ಯಾಂಗೂನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಸೇನೆಯು ಕಳೆದ ಫೆಬ್ರುವರಿ ತಿಂಗಳು ದೇಶದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಗಂಭೀರ ಆರೋಪದಡಿ ಶಿಕ್ಷೆಗೆ ಗುರಿಯಾಗಿರುವ ಏಕೈಕ ವಿದೇಶಿ ಪತ್ರಕರ್ತ ಇವರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು