ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಶನಿವಾರ 82 ಪ್ರತಿಭಟನಾಕಾರರ ಹತ್ಯೆ

Last Updated 11 ಏಪ್ರಿಲ್ 2021, 8:39 IST
ಅಕ್ಷರ ಗಾತ್ರ

ಯಾಂಗೊನ್‌: ಪ್ರಜಾಪ್ರಭುತ್ವದ ಪರವಾಗಿ, ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮತ್ತೆ ರಕ್ತಪಾತವಾಗಿದೆ. ಶನಿವಾರ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 82 ಜನರ ಹತ್ಯೆ ಮಾಡಿರುವುದು ವರದಿಯಾಗಿದೆ.

ಫೆಬ್ರುವರಿಯ ಮಿಲಿಟರಿ ದಂಗೆಯ ನಂತರ ಸುಮಾರು 701 ಪ್ರತಿಭಟನಾಕಾರರ ಹತ್ಯೆಯಾಗಿರುವುದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಮಾರ್ಚ್‌ 14ರ ನಂತರ ಬಗೋ ನಗರದಲ್ಲಿ ಅತಿ ಹೆಚ್ಚು ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ.

ಬಗೋದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಭದ್ರತಾ ಪಡೆಗಳು ಶವಗಳನ್ನು ಸಂಗ್ರಹಿಸಿ ಬೌದ್ಧ ಮಂದಿರದ ಮೈದಾನದಲ್ಲಿ ಹಾಕಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಗ್ರೆನೇಡ್‌ಗಳು, ಮಾರ್ಟರ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಗಳನ್ನು ಬಳಸಿ ಭದ್ರತಾ ಪಡೆಗಳು ಜನರ ಮೇಲೆ ದಾಳಿ ಮಾಡಿರುವುದಾಗಿ ಆರೋಪಿಸಲಾಗಿದೆ.

ಕೆಲವು ಪ್ರತಿಭಟನಾಕಾರರು ಆತ್ಮ ರಕ್ಷಣೆಯ ನಿಟ್ಟಿನಲ್ಲಿ ಫೈರ್‌ಬಾಂಬ್‌ಗಳು, ಬೇಟೆಗೆ ಬಳಸುವ ರೈಫಲ್‌ಗಳನ್ನು ಹಿಡಿದು ಹೋರಾಟಗಳಲ್ಲಿ ಮುನ್ನಡೆದಿದ್ದಾರೆ. ಕಲಾಯ್‌ ಪ್ರದೇಶದಲ್ಲಿ ಮಿಲಿಟರಿ ಪಡೆಯ ವಿರುದ್ಧ ಬೇಟೆಯ ರೈಫಲ್‌ಗಳನ್ನು ಬಳಸಿ, ಮೂವರು ಯೋಧರ ಹತ್ಯೆ ಮಾಡಿರುವುದು ವರದಿಯಾಗಿದೆ.

ಕಾನೂನು ಸುವ್ಯವಸ್ಥೆ, ದೇಶದ ಸ್ಥಿರತೆ ಅಭದ್ರವಾಗಲು ಹರಡುತ್ತಿರುವ ಮಾಹಿತಿಯೇ ಕಾರಣವೆಂದು ಆರೋಪಿಸಿ, ಇತ್ತೀಷೆಗಷ್ಟೇ ಮಿಲಿಟರಿ ಆಡಳಿತವು ಕಲೆ ಮತ್ತು ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ 140 ಜನರ ವಾಂಟೆಡ್‌ ಪಟ್ಟಿ ಪ್ರಕಟಿಸಿದೆ. ಅವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ.

ಯಾಂಗೊನ್‌ನಲ್ಲಿ ಮಾರ್ಚ್‌ 27ರಂದು ಮಿಲಿಟರಿ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯವು 19 ಜನರಿಗೆ ಮರಣದಂಡನೆ ವಿಧಿಸಿರುವುದಾಗಿ ಸರ್ಕಾರ ಸ್ವಾಮ್ಯದ ಎಂಆರ್‌ಟಿವಿ ಚಾನೆಲ್‌ ಶುಕ್ರವಾರ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT