ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆಗೆ ಅಮೆರಿಕದ ಫುಟ್‌ಬಾಲ್‌, ಬಾಸ್ಕೆಟ್‌ಬಾಲ್‌ ಆಟಗಾರರಿಂದ ಬೆಂಬಲ

Last Updated 4 ಫೆಬ್ರುವರಿ 2021, 14:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಮೆರಿಕದ ಫುಟ್‌ಬಾಲ್‌ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ನ ಆಟಗಾರ ಜುಜು ಸ್ಮಿತ್-ಶುಸ್ಟರ್ ಅವರು 10 ಸಾವಿರ ಡಾಲರ್‌ ಮೊತ್ತವನ್ನು ದೇಣಿಗೆ ನೀಡಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವೈದ್ಯಕೀಯ ನೆರವು ನೀಡಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗಾಗಿ 10 ಸಾವಿರ ಡಾಲರ್‌ ಮೊತ್ತವನ್ನು ದೇಣಿಗೆ ನೀಡಿದ್ದೇನೆ. ಈ ಬಗ್ಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಇಂತಹ ಸಮಯದಲ್ಲಿ ಜೀವಗಳನ್ನು ಉಳಿಸಬೇಕಿದೆ. ಹೆಚ್ಚಿನ ಜೀವಗಳನ್ನು ಕಳೆದುಕೊಳ್ಳದಂತೆ ನಾವು ತಡೆಯಬಹುದು ಎಂಬುದಾಗಿ ನಾನು ಭಾವಿಸುತ್ತೇನೆ' ಎಂದು ತಿಳಿಸಿದ್ದಾರೆ.

24 ವರ್ಷದ ಜುಜು ಸ್ಮಿತ್-ಶುಸ್ಟರ್ ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ನ ಖ್ಯಾತ ಆಟಗಾರರಾಗಿದ್ದು, ಅವರು ಪಿಟ್ಸ್‌ಬರ್ಗ್ ಸ್ಟೀಲರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಜುಜು ಸ್ಮಿತ್-ಶುಸ್ಟರ್ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಮೆರಿಕದ ಬಾಸ್ಕೆಟ್‌ಬಾಲ್‌ ಆಟಗಾರ ಕೈಲ್‌ ಕುಜ್ಮಾ ಅವರು ಸಹ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಎನ್‌ಎನ್ ಲೇಖನ ಸಮೇತ ಟ್ವೀಟ್ ಮಾಡಿರುವ ಕುಜ್ಮಾ, 'ಈ ಬಗ್ಗೆ ಮಾತನಾಡಬೇಕಿದೆ' ಎಂದು ಹೇಳಿದ್ದಾರೆ.

ಕೈಲ್‌ ಕುಜ್ಮಾ ಅವರು ಅಮೆರಿಕದ ನ್ಯಾಷನಲ್ ಬಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌(ಎನ್‌ಬಿಎ) ಆಟಗಾರರಾಗಿದ್ದು, ಲಾಸ್‌ ಎಂಜಲೀಸ್‌ ಲೇಕರ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ.

ಮಾಜಿ ಎನ್‌ಬಿಎ ಆಟಗಾರ ಬ್ಯಾರನ್ ಡೇವಿಸ್ ಅವರು ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. 'ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ತಿಳಿಯಲಿದ್ದೇಯೇ? ನನ್ನ ಒಳ್ಳೆಯ ಜನರು ಸ್ವತಂತ್ರವಾಗಲಿ. ರೈತರು ನಮಗೆ ಜೀವನ ವಿಧಾನವನ್ನು ಒದಗಿಸುತ್ತಾರೆ. ಅವರು ಉತ್ತಮವಾಗಿ ಜೀವಿಸುವ ಹಕ್ಕನ್ನು ಹೊಂದಿರಲೇಬೇಕು' ಎಂದು ಹೇಳಿದ್ದಾರೆ.

ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದರು. ಈ ಕುರಿತು ಸಿಎನ್‌ಎನ್ ಲೇಖನ ಸಮೇತ ಟ್ವೀಟ್ ಮಾಡಿರುವ ರಿಹಾನ್ನಾ, ನಾವ್ಯಾಕೆ ಈ ವಿಷಯದ ಚರ್ಚಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ರಿಹಾನ್ನಾ ಟ್ವೀಟ್‌ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT