ಸೋಮವಾರ, ಅಕ್ಟೋಬರ್ 18, 2021
22 °C

ನ್ಯೂಜಿಲೆಂಡ್‌: ಆಕ್ಲೆಂಡ್‌ನಲ್ಲಿ ಇನ್ನೂ 2 ವಾರ ಲಾಕ್‌ಡೌನ್‌

ಎಪಿ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌– ಪ್ರಾತಿನಿಧಿಕ ಚಿತ್ರ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಅತಿ ದೊಡ್ಡ ನಗರ ಆಕ್ಲೆಂಡ್‌ನಲ್ಲಿ ಮಂಗಳವಾರದಿಂದ ಕೋವಿಡ್‌ ನಿಯಂತ್ರಣದ ಕೆಲವು ನಿಯಮಗಳನ್ನು ಸಡಿಸಲಾಗುವುದು. ಆದರೆ ಲಾಕ್‌ಡೌನ್‌ ಕನಿಷ್ಠ ಇನ್ನೂ ಎರಡು ವಾರಗಳವರೆಗೆ ಮುಂದುವರೆಯಲಿದೆ.

ಆಕ್ಲೆಂಡ್‌ನಲ್ಲಿ ಒಂದು ತಿಂಗಳಿನಿಂದ ಕಠಿಣ ನಿಯಮಾವಳಿಗಳ ಲಾಕ್‌ಡೌನ್‌ ಜಾರಿಯಲ್ಲಿದೆ. ಸಾಂಕ್ರಾಮಿಕ ಆರಂಭವಾದಾಗಿನಿಂದ ಇದು ದೀರ್ಘ ಅವಧಿವರೆಗಿನ ಲಾಕ್‌ಡೌನ್‌ ಆಗಿದೆ.

ಮಂಗಳವಾರದಿಂದ ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ ವ್ಯವಸ್ಥೆ ಇರುತ್ತದೆ. ಕೆಲವೆಡೆ ಕೆಲಸದ ಸ್ಥಳಗಳು ಪುನರಾರಂಭಗೊಳ್ಳಲಿವೆ. ಆದರೆ ಬಹುತೇಕ ಮಂದಿ ಮನೆಯಿಂದಲೇ ಕೆಲಸ ಮಾಡಬೇಕಿದೆ. ಶಾಲೆಗಳು ಮುಚ್ಚಿರುತ್ತವೆ.

ನಗರದಲ್ಲಿ ಪ್ರತಿ ದಿನ ಡೆಲ್ಟಾ ತಳಿಯ 20 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಆಕ್ಲೆಂಡ್‌ನ ಸಮೀಪದ ಪಟ್ಟಣಕ್ಕೂ ಸೋಂಕು ಹರಡಿದೆ. ಸೋಂಕುಪೀಡಿತ ಕೈದಿಯೊಬ್ಬ ಜಾಮೀನು ಪಡೆದು ಮನೆಗೆ ತೆರಳಿದ್ದು ಇದಕ್ಕೆ ಕಾರಣ.

ಪ್ರಧಾನಿ ಜಸಿಂಡಾ ಆರ್ಡನ್‌ ಅವರು, ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಣಾಮಕಾರಿ ಎಂಬ ವಿಶ್ವಾಸವನ್ನುವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು