ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗ್ನಮ್‌ ಸ್ಟೈಲ್‌, ಬೀಟ್‌ ಸಾಂಗ್‌ ಕೇಳುವಂತಿಲ್ಲ: ದಕ್ಷಿಣ ಕೊರಿಯದ ಕೋವಿಡ್‌ ನಿಯಮ

Last Updated 13 ಜುಲೈ 2021, 10:31 IST
ಅಕ್ಷರ ಗಾತ್ರ

ಸೋಲ್‌: ಜಿಮ್‌ಗೆ ಹೋಗುವವರು ತಾಲೀಮು ಮಾಡುವ ವೇಳೆ ಜೋರಾದ ಬೀಟ್‌ ಸಾಂಗ್‌ಗಳನ್ನು ಕೇಳುವುದು ಸಾಮಾನ್ಯ. ಆದರೆ ದಕ್ಷಿಣ ಕೊರಿಯಾದಲ್ಲಿ ಕೋವಿಡ್‌ನ ಹೊಸ ನಿಯಮಾವಳಿಗಳು, ಜಿಮ್‌ಗಳ ಸಂಗೀತವನ್ನು ಅಡಗುವಂತೆ ಮಾಡಿವೆ.

ದೈಹಿಕ ಅಂತರ, ಪ್ರಯಾಣದ ನಿರ್ಬಂಧಗಳ ಜೊತೆಗೆ, ಏರೋಬಿಕ್ಸ್ ಮತ್ತು ಸ್ಪಿನ್ನಿಂಗ್‌ನಂತಹ ಗುಂಪು ವ್ಯಾಯಾಮದಲ್ಲಿ ಜೋರು ಧನಿಯ ಸಂಗೀತ ಕೇಳದಂತೆ ಸೂಚಿಸಲಾಗಿದೆ. ನಿಮಿಷಕ್ಕೆ 120ಕ್ಕಿಂತಲೂ ಹೆಚ್ಚು ಬೀಟ್‌ಗಳಿರುವ ಸಂಗೀತವನ್ನು ಜಿಮ್‌ಗಳಲ್ಲಿ ಹಾಕುವಂತಿಲ್ಲ ಎಂದು ದಕ್ಷಿಣ ಕೊರಿಯಾದ ಜಿಮ್‌ಗಳಿಗೆ ತಿಳಿಸಲಾಗಿದೆ.

'ಜನ ಜೋರಾಗಿ ಉಸಿರಾಡುವುದನ್ನು ತಪ್ಪಿಸಲು ಮತ್ತು ಬೆವರಿನ ಹನಿಗಳು ಇನ್ನೊಬ್ಬರ ಮೇಲೆ ಬೀಳದಂತೆ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ,' ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಿಯಮವನ್ನು ವಿರೋಧ ಪಕ್ಷದ ಕೆಲವು ಸಂಸದರು ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ, ಇದು "ಅಸಂಬದ್ಧ" ಎಂದು ಜರೆದಿದ್ದಾರೆ. ಜಿಮ್ ಮಾಲೀಕರು ಈ ನಿಯಮಗಳನ್ನು ಅವಾಸ್ತವಿಕ ಎಂದೂ ಹೇಳಿದ್ದಾರೆ.

'ಜೋರಾದ ಬೀಟ್‌ ಸಾಂಗ್‌ಗಳನ್ನು ಹಾಕುವುದರಿಂದ ಜಿಮ್‌ನಲ್ಲಿ ತಾಲೀಮು ಮಾಡುವವರನ್ನು ಹುರುದುಂಬಿಸಬಹುದು. ಶಾಸ್ತ್ರೀಯ ಸಂಗೀತ ಅಥವಾ ಬೀಟ್‌ ಸಾಂಗ್‌ಗಳು ವೈರಸ್ ಹರಡುವಿಕೆಯ ಮೇಲೆ ಯಾವುದಾದರೂ ಪರಿಣಾಮ ಬೀರುತ್ತವೆ ಎಂಬುದು ನನ್ನ ದೊಡ್ಡ ಪ್ರಶ್ನೆಯಾಗಿದೆ,' ಎನ್ನುತ್ತಾರೆ ಉತ್ತರ ಸಿಯೋಲ್‌ನ ಜಿಮ್‌ ಮಾಲೀಕ ಕಾಂಗ್ ಹ್ಯುನ್-ಕು. ಅವರ ಸಾಂಗ್‌ ಪ್ಲೇ ಲಿಸ್ಟ್‌ನಲ್ಲಿ ಬೀಟ್‌, ಪಾಪ್ ಹಾಡುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವುಗಳನ್ನು ಮುಂಜಾನೆಯ ಜಿಮ್‌ನ ಅವಧಿಯಲ್ಲಿ ತಾಲೀಮು ಮಾಡುವವರಿಗೆ ಕೇಳಿಸುವುದು ಅವರ ದೈನಂದಿನ ಪರಿಪಾಠವೂ ಆಗಿದೆ.

'ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮದೇ ಇಯರ್‌ಫೋನ್‌ಗಳನ್ನು, ಸಂಗೀತ ಸಾಧನಗಳನ್ನು ಹೊಂದಿದ್ದಾರೆ. ಅವರು ಹಾಡು ಕೇಳುವುದನ್ನು ನಿರ್ಬಂಧಿಸಲು ನಮಗೆ ಹೇಗೆ ಸಾಧ್ಯ,'ಎಂದು ಅವರು ಪ್ರಶ್ನಿಸಿದ್ದಾರೆ.

120 ಬೀಟ್‌ಗಳ ಹಾಡುಗಳನ್ನಷ್ಟೇ ಹಾಕಬೇಕು ಎಂದು ಹೇಳಿರುವುದರಿಂದ ದಕ್ಷಿಣ ಕೊರಿಯಾದ ಖ್ಯಾತ ಪಾಪ್‌ ಗಾಯಕ ಪ್ಸಿ ಅವರ 'ಗಂಗ್ನಮ್‌ ಸ್ಟೈಲ್‌' ಹಾಡು ಅಲ್ಲಿನ ತಾಲೀಮು ಕೇಂದ್ರಗಳಲ್ಲಿ ಕೇಳದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT