ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಕಿ.ಮೀ ದೂರ ಹಾರಿಬಂದ ಉತ್ತರ ಕೊರಿಯಾದ ಶಂಕಿತ ಕ್ಷಿಪಣಿ: ಜಪಾನ್‌ ರಕ್ಷಣಾ ಸಚಿವ

Last Updated 5 ಜನವರಿ 2022, 4:06 IST
ಅಕ್ಷರ ಗಾತ್ರ

ಟೊಕಿಯೊ: ಉತ್ತರ ಕೋರಿಯಾದ ಶಂಕಿತ ಬ್ಯಾಲಿಸ್ಟಿಕ್‌ ಕ್ಷಿಪಣಿ ಸುಮಾರು 500 ಕಿ.ಮೀ ದೂರದ ವರೆಗೆ ಹಾರಿ ಬಂದಿದೆ ಎಂದು ಎಂದು ಜಪಾನ್‌ನ ರಕ್ಷಣಾ ಸಚಿವ ಹೇಳಿದ್ದಾರೆ.

ಬುಧವಾರ ಶಂಕಿತ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಉತ್ತರ ಕೊರಿಯಾ ತನ್ನ ಪೂರ್ವ ಭಾಗದ ಕರಾವಳಿಯಲ್ಲಿ ಉಡಾವಣೆ ಮಾಡಿದೆ. ಅಸ್ಥಿರಗೊಂಡಿರುವ ಆಂತರಿಕ ಪರಿಸ್ಥಿತಿಯನ್ನು ಸೇನಾಬಲದಿಂದ ಹತ್ತಿಕ್ಕುವುದಾಗಿ ಹೊಸ ವರ್ಷದ ದಿನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.

ಜಪಾನ್‌ನ ಆರ್ಥಿಕ ವಲಯದ ಹೊರಗಿನ ಪ್ರದೇಶದಲ್ಲಿ ಕ್ಷಿಪಣಿಯು ಬಿದ್ದಿದೆ ಎಂದು ಜಪಾನ್‌ನ ರಕ್ಷಣಾ ಸಚಿವ ನೊಬೌ ಕಿಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT