ಶನಿವಾರ, ಅಕ್ಟೋಬರ್ 23, 2021
20 °C

ನೊಬೆಲ್‌ 2021: ಅಬ್ದುಲ್‌ರಜಾಕ್‌ ಗುರ್ನಾಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಮ್‌: ಕಾದಂಬರಿಕಾರ ಅಬ್ದುಲ್‌ರಜಾಕ್‌ ಗುರ್ನಾಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ.

ಪೂರ್ವ ಆಫ್ರಿಕಾದ ತಾಂಜೇನಿಯಾದ (ಜಾಂಜಿಬಾರ್‌) ಅಬ್ದುಲ್‌ರಜಾಕ್‌ ಗುರ್ನಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗಲ್ಫ್‌ ರಾಷ್ಟ್ರಗಳಲ್ಲಿನ ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ,  ಏಷ್ಯಾ–ಆಫ್ರಿಕಾ ಖಂಡಗಳ ನಡುವಿನ ದೇಶಗಳಲ್ಲಿನ ವಲಸಿಗರ ಭವಿಷ್ಯದ ಕುರಿತಾದ ಸಹಾನುಭೂತಿ ಹಾಗೂ ರಾಜಿಯಿಲ್ಲದ ನಿಲುವುಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್‌ ಸಮಿತಿ ತಿಳಿಸಿದೆ.

ಇದನ್ನು ಓದಿ: ನೊಬೆಲ್ 2021: ರಸಾಯನಶಾಸ್ತ್ರ ವಿಭಾಗದಲ್ಲಿ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ

ಅಬ್ದುಲ್‌ರಜಾಕ್‌ ಗುರ್ನಾ ಅವರು ಮೂರು ಕಾದಂಬರಿಗಳನ್ನು ಬರೆದಿದ್ದಾರೆ. 1994ರಲ್ಲಿ ಅವರ ಮೊದಲ ಕಾದಂಬರಿ ’ಪ್ಯಾರಡೈಸ್‌’ ಪ್ರಕಟವಾಯಿತು. 2001ರಲ್ಲಿ ’ಬೈ ದಿ ಸೀ’, 2005ರಲ್ಲಿ 'ಡೆಜರ್ಸನ್‌’ ಕಾದಂಬರಿಯನ್ನು ಪ್ರಕಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು