ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಲವು ಆರೋಗ್ಯ ಸೇವೆಗೆ ಕೋ–ವಿನ್‌ ಬಳಕೆ’

Last Updated 19 ಜೂನ್ 2022, 14:37 IST
ಅಕ್ಷರ ಗಾತ್ರ

ಪ್ಯಾರಿಸ್‌: ಮಕ್ಕಳ ಲಸಿಕೆ ಅಭಿಯಾನ, ಅಂಗಾಂಗ ಮತ್ತು ರಕ್ತದಾನ ಸೇವೆ ಒದಗಿಸಲು ಸರ್ಕಾರದ ಆನ್‌ಲೈನ್‌ ವೇದಿಕೆಗಳು ಆರು ತಿಂಗಳೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ. ಆದರೆ, ಈ ವೇದಿಕೆಗಳಿಗೆ ಅಗತ್ಯ ದತ್ತಾಂಶ ಸೇರಿಸಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ವಿವಾಟೆಕ್ 2022ರ ವೇಳೆ ಕೋ-ವಿನ್ ಮುಖ್ಯಸ್ಥ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್.ಎಸ್. ಶರ್ಮಾ, ‘ಪೋಷಕರು ತಮ್ಮ ಮಕ್ಕಳ ಲಸಿಕೆ ವೇಳಾಪಟ್ಟಿ ಪತ್ತೆಹಚ್ಚಲು ಮಗುವಿನ ಜನನ ಮತ್ತು ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಲಸಿಕಾ ಕೇಂದ್ರಗಳಂತಹ ಇನ್ನಿತರ ಅಗತ್ಯ ಮಾಹಿತಿಯನ್ನು ಇಲಾಖೆಗಳೂ ನೀಡುವ ಅಗತ್ಯವಿದೆ’ ಎಂದು ಹೇಳಿದರು.

‘ನಾವು ಒಂದೇ (ಕೋ-ವಿನ್) ಆರ್ಕಿಟೆಕ್ಚರ್ ಅನ್ನು ಆಧರಿಸಿ ಮೂರು ವಿಭಿನ್ನ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸುತ್ತಿದ್ದೇವೆ. ಅದು ಯಾವಾಗ ಸಿದ್ಧವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅದು ಅವರು ಅಳವಡಿಸಿಕೊಳ್ಳುವುದರ ಮೇಲೆ ನಿಂತಿದೆ. ದತ್ತಾಂಶವನ್ನು ಸೇರಿಸಿದಾಗ ಅದು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಅವುಗಳಲ್ಲಿ ಮೂರಕ್ಕೂ (ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮ, ರಕ್ತ ಮತ್ತು ಅಂಗಾಂಗ ದಾನ) ತಂತ್ರಜ್ಞಾನವು ಆರು ತಿಂಗಳಲ್ಲಿ ಸಿದ್ಧವಾಗಲಿದೆ’ ಎಂದು ಶರ್ಮಾ ಹೇಳಿದರು.

ಕೋ–ವಿನ್‌ ವೇದಿಕೆಯ ಯಶಸ್ಸಿನ ನಂತರ ಸರ್ಕಾರವು ವಿವಿಧ ಆರೋಗ್ಯ ಸೇವೆಗಳಿಗೆ ಈ ತಂತ್ರಜ್ಞಾನವನ್ನು ಮರು ಬಳಕೆ ಮಾಡಲು ಎದುರು ನೋಡುತ್ತಿದೆ. ಕೋ-ವಿನ್ ಪ್ಲಾಟ್‌ಫಾರ್ಮ್ ತಂತ್ರಜ್ಞಾನ ಕಲಿಯಲು ಮತ್ತು ಅಳವಡಿಸಿಕೊಳ್ಳಲು 130ಕ್ಕೂ ಹೆಚ್ಚು ದೇಶಗಳು ಭಾರತದೊಂದಿಗೆ ಚರ್ಚೆ ನಡೆಸುತ್ತಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT