ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಭೂಕಂಪನ; ಸುನಾಮಿ ಭೀತಿಯ ಆತಂಕ ದೂರ

Last Updated 5 ಮಾರ್ಚ್ 2021, 4:15 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್: ಆಧುನಿಕ ಕಾಲದಲ್ಲಿ ದಕ್ಷಿಣ ಪೆಸಿಫಿಕ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಳಿಸಿದ ಪ್ರಬಲ ಭೂಕಂಪನದ ಬೆನ್ನಲ್ಲೇ ಸುನಾಮಿ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಲಾಯಿತು. ಪರಿಣಾಮ ನ್ಯೂಜಿಲೆಂಡ್‌ನಲ್ಲಿ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಆದರೆ ಇದೀಗ ಸುನಾಮಿ ಭೀತಿಯ ಆತಂಕ ದೂರವಾಗಿದ್ದು, ಜನರು ನಿರಾಳರಾಗಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಸಣ್ಣ ಮಟ್ಟದ ಸುನಾಮಿ ಅಲೆಗಳು ಎದ್ದಿದ್ದು,ಅಲ್ಪ ಪ್ರಮಾಣದ ಹಾನಿಯುಂಟಾಗಿದೆ.

ಮೂರನೇ ಬಾರಿಗೆ ನ್ಯೂಜಿಲೆಂಡ್‌ನಿಂದ 1,000 ಕಿ.ಮೀ. ದೂರದ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ಮೊದಲು ಹಲವಾರು ತಾಸುಗಳ ಅಂತರದಲ್ಲಿ ಸಂಭವಿಸಿದ ನಡುಕದಲ್ಲಿ 7.4 ಹಾಗೂ 7.3 ತೀವ್ರತೆಯ ಭೂಕಂಪನಗಳುಸಂಭವಿಸಿತ್ತು.

ನ್ಯೂಜಿಲೆಂಡ್‌ನಲ್ಲಿ ಸುನಾಮಿ ಎಚ್ಚರಿಕೆ ಬೆನ್ನಲ್ಲೇ ವಾಹನ ದಟ್ಟಣೆ ಸೃಷ್ಟಿಯಾಗಿ ಗೊಂದಲಕ್ಕೆ ಕಾರಣವಾಯಿತು. ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಪರದಾಡಿದರು.

ಗಿಸ್ಬೋರ್ನ್ ಬಳಿಯ ಟೊಕೊಮರು ಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಎದ್ದಿವೆ.ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯು ಸುನಾಮಿ ಭೀತಿಯ ಆತಂಕ ದೂರವಾಗಿದ್ದು, ಜನರು ಮನೆಗೆ ಹಿಂತಿರುಗಲು ತಿಳಿಸಿದೆ. ಆದರೂ ಕಡಲ ತೀರಕ್ಕೆ ಹೋಗಬಾರದಂತೆ ಸೂಚಿಸಿದೆ.

ಮೊದಲ ಕಂಪನವು ನ್ಯೂಜಿಲೆಂಡ್‌ಗೆ ಬಹಳ ಹತ್ತಿರವಾಗಿತ್ತು. ಮಧ್ಯ ರಾತ್ರಿ ಎಚ್ಚೆತ್ತುಕೊಂಡ ಜನರು ಭೀತಿಗೊಳಗಾದರು. ಪ್ರಧಾನಿ ಜಸಿಂದಾ ಆರ್ಡೆರ್ನ್ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದರು.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ವರದಿ ಪ್ರಕಾರ ಕೆರ್ಮಾಡೆಕ್ ದ್ವೀಪದಲ್ಲಿ 19 ಕಿ.ಮೀ. ಆಳ ಸಮುದ್ರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತಿಳಿಸಿದೆ.

2011ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪನದಲ್ಲಿ 185 ಮಂದಿ ಮೃತಪಟ್ಟಿದ್ದರು. ಅಲ್ಲದೆ ಅಪಾರ ಹಾನಿ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT