ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಷ್ಕರ್‌ನಿಂದ ತರಬೇತಿ ಪಡೆದ ಉಗ್ರರ ಬಳಸಿ ಪಾಕ್ ಸೇನೆಯಿಂದ ತಾಲಿಬಾನ್‌ಗೆ ನೆರವು

Last Updated 20 ಆಗಸ್ಟ್ 2021, 15:30 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರವನ್ನು ಮರಳಿ ಪಡೆಯುವಲ್ಲಿ ಪಾಕಿಸ್ತಾನದ ಪಾತ್ರವೂ ಇರುವುದು ಬಯಲಾಗಿದೆ. ತರಬೇತಿ ಪಡೆದ ಉಗ್ರರನ್ನು ತಾಲಿಬಾನ್‌ ನೆರವಿಗೆ ಪಾಕಿಸ್ತಾನ ಸೇನೆಯು ಕಳುಹಿಸಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ಲಷ್ಕರ್‌–ಎ–ತಯ್ಬಾ ಉಗ್ರ ಸಂಘಟನೆಯ ಶಿಬಿರಗಳಲ್ಲಿ ತರಬೇತಿ ಪಡೆದ, ಪಂಜಾಬ್‌ನ ಅನೇಕರನ್ನು ಪಾಕಿಸ್ತಾನ ಸೇನೆಯು ತಾಲಿಬಾನ್ ನೆರವಿಗೆ ಕಳುಹಿಸಿಕೊಟ್ಟಿತ್ತು ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಂಜಾಬ್ ಪ್ರಾಂತ್ಯವು ಪಾಕಿಸ್ತಾನ ಸೇನೆ ಬೆಂಬಲಿತ ಲಷ್ಕರ್‌–ಎ–ತಯ್ಬಾ ಮತ್ತು ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಗಳ ತವರಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪಂಜಾಬ್‌ನ ಉಗ್ರರಲ್ಲಿ ಹೆಚ್ಚಿನವರು ಲಷ್ಕರ್‌ನವರಾಗಿದ್ದಾರೆ. ವಿವಿಧ ಅಂದಾಜುಗಳ ಪ್ರಕಾರ ಇವರ ಒಟ್ಟು ಸಂಖ್ಯೆ ಸುಮಾರು 10,000 ಇರಬಹುದು ಎನ್ನಲಾಗಿದೆ.

ಕಂದಹಾರ್‌ನಲ್ಲಿ ತಾಲಿಬಾನ್‌ ಉಗ್ರರ ಜತೆ ಲಷ್ಕರ್ ಉಗ್ರರೂ ಕಾಣಿಸಿಕೊಂಡಿದ್ದಾರೆ. ಸಂಘರ್ಷದಲ್ಲಿ ಹಲವಾರು ಲಷ್ಕರ್ ಉಗ್ರರೂ ಮೃತಪಟ್ಟಿದ್ದಾರೆ.

ಕಂದಹಾರ್‌ನ ನವಾಹಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ ಸೈಫುಲ್ಲಾ ಖಾಲಿದ್ ಸೇರಿದಂತೆ ಆತನ ನೇತೃತ್ವದ ಲಷ್ಕರ್ ತಂಡದಲ್ಲಿದ್ದ 11 ಮಂದಿ ಮೃತಪಟ್ಟಿದ್ದರು.

ಪಂಜಾಬ್‌ನ ಲಷ್ಕರ್ ಕಮಾಂಡರ್ ಇಮ್ರಾನ್ ಬದಲಿಗೆ ಖಾಲಿದ್‌ನನ್ನು ನೇಮಕ ಮಾಡಲಾಗಿತ್ತು. ಇಮ್ರಾನ್ ಈ ಹಿಂದೆ ಕಾಶ್ಮೀರದಲ್ಲಿಯೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ.

ಹತ್ಯೆಗೀಡಾದ ಉಗ್ರರ ಮೃತದೇಹಗಳನ್ನು ಅವರ ತವರಿಗೆ ಸಾಗಿಸಲೂ ಪಾಕಿಸ್ತಾನ ವ್ಯವಸ್ಥೆ ಮಾಡಿತ್ತು. ಗಾಯಗೊಂಡ ಲಷ್ಕರ್ ಉಗ್ರರ ಚಿಕಿತ್ಸೆಗಾಗಿ ಪಾಕಿಸ್ತಾನವು ಅಫ್ಗಾನಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನೂ ನಿರ್ಮಿಸಿತ್ತು ಎಂದೂ ವರದಿ ಹೇಳಿದೆ.

ಪಾಕಿಸ್ತಾನದ ವಿವಿಧ ಜಿಲ್ಲೆಗಳ ಯುವಕರನ್ನು ತಾಲಿಬಾನ್ ಹೋರಾಟದಲ್ಲಿ ಕೈಜೋಡಿಸುವಂತೆ ಪಾಕ್ ಸೇನೆ ಪ್ರಚೋದಿಸಿತ್ತು. ಕ್ವೆಟ್ಟಾ, ದೇರಾ ಇಸ್ಮಾಯಿಲ್ ಖಾನ್, ಕಾರಕ್, ಹಂಗು, ಖೋಟ್, ಪೇಷಾವರ, ಮರ್ದಾನ್ ಮತ್ತು ನೌಶೇರಾ ಪ್ರದೇಶಗಳಿಂದ ಹೆಚ್ಚಿನ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT