ಬುಧವಾರ, ಅಕ್ಟೋಬರ್ 28, 2020
29 °C

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಪಾಕಿಸ್ತಾನ ಮರು ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ದಮನವಾಗುತ್ತಿವೆ ಎಂಬ ಆರೋಪಗಳ ನಡುವೆಯೂ, ಆ ರಾಷ್ಟ್ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಮರು ಆಯ್ಕೆಯಾಗಿದೆ. 

ಏಷ್ಯಾ– ಪೆಸಿಫಿಕ್‌ನ ವಲಯದ ಐದು ಅಭ್ಯರ್ಥಿಗಳ ಪೈಕಿ ಪಾಕಿಸ್ತಾನಕ್ಕೆ ಅತಿ ಹೆಚ್ಚು ಮತಗಳು ಲಭಿಸಿವೆ. ಪಾಕಿಸ್ತಾನ 169, ಉಜ್ಬೇಕಿಸ್ತಾನ 164, ನೇಪಾಳ 150, ಚೀನಾ 139 ಮತಗಳನ್ನು ಪಡೆದು ಆಯ್ಕೆಯಾಗಿವೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಚುನಾವಣೆಗೆ ಸ್ಪರ್ಧಿಸಿದ್ದ ಚೀನಾ, ರಷ್ಯಾ, ಸೌದಿ ಅರೇಬಿಯಾ, ಕ್ಯೂಬಾ,‍ ಪಾಕಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳನ್ನು ವಿರೋಧಿಸಬೇಕು ಎಂದು ಕಳೆದ ವಾರ ಯುರೋಪ್‌ನ ಮಾನವ ಹಕ್ಕುಗಳ ಗುಂಪು, ಅಮೆರಿಕ ಮತ್ತು ಕೆನಡಾ ರಾಷ್ಟ್ರಗಳು ಕರೆ ನೀಡಿದ್ದವು. ಆ ದೇಶಗಳ ಮಾನವ ಹಕ್ಕುಗಳ ಹಿನ್ನೆಲೆಯೇ ಅವರನ್ನು ಅನರ್ಹರನ್ನಾಗಿಸಿವೆ ಎಂದು ಗುಂಪುಗಳು ಪ್ರತಿಪಾದಿಸಿದ್ದವು. 

‌ಆದರೆ, ಈ ಬಾರಿ ರಷ್ಯಾ ಮತ್ತು ಕ್ಯೂಬಾ ರಾಷ್ಟ್ರಗಳು ಅವಿರೋಧವಾಗಿ ಆಯ್ಕೆಯಾದವು. ಪಾಕಿಸ್ತಾನ 2018 ಜ.1 ರಿಂದ ಎಚ್‌ಆರ್‌ಸಿಯ ಸದಸ್ಯ ರಾಷ್ಟ್ರವಾಗಿದ್ದು, ಇದೀಗ ಮರು ಆಯ್ಕೆಯಾಗಿದೆ. ಅದರ ಸದಸ್ಯತ್ವ ಅವಧಿ ಮೂರು ವರ್ಷ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು