ಮಂಗಳವಾರ, ಜೂನ್ 15, 2021
27 °C

ಇಮ್ರಾನ್ ಖಾನ್ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿಯಾಗಲಿದೆ: ಭುಟ್ಟೊ

ಏಜೆನ್ಸೀಸ್‌‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ಅಧಿಕಾರಾವಧಿಯನ್ನು ಪೂರೈಸಿದರೆ ದೇಶವು ದಿವಾಳಿಯಾಗಲಿದೆ ಎಂದು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲವಾಲ್‌ ಭುಟ್ಟೊ ಜರ್ದಾರಿ ಹೇಳಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕಕ್ಕೂ ಮೊದಲೇ ದೇಶದ ಆರ್ಥಿಕತೆಯನ್ನು ಪ್ರಧಾನಿ ಹಾಳು ಮಾಡಿದ್ದಾರೆ. ಈಗಿನ ಆಡಳಿತದಿಂದಾಗಿ ಮುಂದಿನ ಸರ್ಕಾರಗಳು ದಶಕಗಳ ವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ. ದತ್ತಿ ಸಂಸ್ಥೆಯ ಮಾದರಿಯಲ್ಲಿ ದೇಶವನ್ನಾಳುವ ಇಮ್ರಾನ್‌ ಖಾನ್‌ ಯೋಜನೆ ವಿಫಲವಾಗಿದೆ ಎಂದು ಪಿಪಿಪಿ ಮುಖ್ಯಸ್ಥ ಆರೋಪಿಸಿರುವುದಾಗಿ ಡೈಲಿ ಟೈಮ್ಸ್‌ ವರದಿ ಮಾಡಿದೆ.

ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ಎಲ್ಲ ಪ್ರಧಾನಿಗಳು ಸೇರಿ ಕೂಡಿಸಿದ್ದಕ್ಕಿಂತ ಹೆಚ್ಚು ಹಾನಿಯನ್ನು ಇಮ್ರಾನ್ ಖಾನ್‌ ಒಬ್ಬರೇ ಮಾಡಿದ್ದಾರೆ ಎಂದು ಭುಟ್ಟೊ ಕಿಡಿಕಾರಿದ್ದಾರೆ. ಮುಂದುವರಿದು, ಇಮ್ರಾನ್‌ ಮತ್ತು ಅವರ ಬೆಂಬಲಿಗರು ಹಣ ಲೂಟಿ ಮಾಡಿದ ಬಳಿಕ ಪರ್ವೇಜ್‌ ಮುಷರಫ್‌ ಅವರಂತೆಯೇ ಲಂಡನ್‌ಗೆ ಪಲಾಯನಾ ಮಾಡುತ್ತಾರೆ ಎಂದೂ ಆರೋಪಿಸಿದ್ದಾರೆ.

ಆರೋಪ ಮುಂದುವರಿಸಿದ ಭುಟ್ಟೊ, ಯುವಕರ ಭರವಸೆಗಳನ್ನು ಕೊನೆಗಾಣಿಸಿರುವುದು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಡಿದ ದೊಡ್ಡ ಅಪರಾಧ. ಸದ್ಯ ಪಾಕಿಸ್ತಾನದ ಆರ್ಥಿಕತೆಯು ಗಂಭೀರ ಸ್ಥಿತಿಯಲ್ಲಿದ್ದು, ಕೋವಿಡ್‌-19 ಸಾಂಕ್ರಾಮಿಕವು ಆರ್ಥಿಕ ಬೆಳವಣಿಗೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು