ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಭಾರತೀಯ ಔಷಧ ತಯಾರಿಕಾ ಸಂಸ್ಥೆಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಫಿಜರ್

Last Updated 17 ನವೆಂಬರ್ 2020, 10:59 IST
ಅಕ್ಷರ ಗಾತ್ರ

ಹೈದರಾಬಾದ್‌: ಭಾರತದ ಅರವಿಂದೊ ಫಾರ್ಮಾ ಲಿಮಿಟೆಡ್ ಮತ್ತು ಡಾ. ರೆಡ್ಡಿ ಪ್ರಯೋಗಾಲಯದ ವಿರುದ್ಧ ಫಿಜರ್‌ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿದೆ.

ಅರವಿಂದೊ ಹಾಗೂ ರೆಡ್ಡೀಸ್‌ ಕಂಪನಿಗಳು ತನ್ನ ಒಡೆತನದ ಇಬ್ರಾನ್ಸ್ ‌(ಪಾಲ್ಬೊಸಿಕ್ಲಿಬ್) ಔಷಧವನ್ನೇ ಹೋಲುವಂತಹ ಪ್ರತ್ಯೇಕ ಔಷಧಿಗಳನ್ನು ತಯಾರಿಸಲು ಮುಂದಾಗಿವೆ ಎಂದು ದೂರಿರುವ ಫಿಜರ್‌, ಈ ಎರಡೂ ಕಂಪನಿಗಳ ವಿರುದ್ಧ ಅಮೆರಿಕದ ಡಿಸ್ಟ್ರಿಕ್ಟ್‌ ನ್ಯಾಯಾಲಯದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯ ದಾವೆ ಹೂಡಿದೆ.

ಪಾಲ್ಬೊಸಿಕ್ಲಿಬ್‌ ಔಷಧಿಯು ಸ್ತನ ಕ್ಯಾನ್ಸರ್‌ಗೆ ಕಡಿವಾಣ ಹಾಕಲು ಮತ್ತು ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಕಾರಿಯಾಗಿದೆ. ಈ ಔಷಧಿಯಿಂದಾಗಿಯೇ ಹೋದ ವರ್ಷ ಅಮೆರಿಕದಲ್ಲಿ ಸುಮಾರು ₹24,232 ಕೋಟಿ (3.5 ಬಿಲಿಯನ್‌ ಡಾಲರ್‌) ಸೇರಿದಂತೆ ವಿಶ್ವದಾದ್ಯಂತ ಒಟ್ಟು ₹37,287 ಕೋಟಿ (5 ಬಿಲಿಯನ್‌ ಡಾಲರ್‌) ಆದಾಯ ಗಳಿಸಿರುವುದಾಗಿ ಫಿಜರ್ ಸಂಸ್ಥೆಯು ತನ್ನ‌ ವಾರ್ಷಿಕ ವರದಿಯಲ್ಲಿ ಹೇಳಿದೆ.

ಇಬ್ರಾನ್ಸ್‌ ಔಷಧಿಯನ್ನೇ ಹೋಲುವ ಜೆನರಿಕ್‌ ಔಷಧ ಮಾರಾಟಕ್ಕೆ ಅನುಮತಿ ಕೋರಿ ಹಲವು ಕಂಪನಿಗಳು2019ರ ಮಾರ್ಚ್‌ನಲ್ಲಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ಕ್ಕೆ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ ಭಾರತದ ಕಂ‍ಪನಿಗಳೂ ಇದ್ದವು. ಆದರೆ ಫಿಜರ್‌ ಕಂಪನಿಯುಇಬ್ರಾನ್ಸ್‌ ಔಷಧಿಗಾಗಿ ಪಡೆದಿರುವ ಹಕ್ಕು 2023ರಲ್ಲಿ ಅಂತ್ಯವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT