ಢಾಕಾ: ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ 1971ರಲ್ಲಿ ಯುದ್ಧ ಗೆದ್ಧ 50ನೇ ವರ್ಷಾಚರಣೆ ಅಂಗವಾಗಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಬಾಂಗ್ಲಾದೇಶದ ರಾಷ್ಟ್ರಪತಿ ಅಬ್ದುಲ್ ಹಮೀದ್ ಅವರಿಗೆ 1971ರ ಜಮಾನದ ಮಿಗ್–21 ವಿಮಾನದ ಪ್ರತಿಕೃತಿಯನ್ನು ನೀಡಿದ್ದಾರೆ.ಉಭಯ ದೇಶಗಳ ಯೋಧರ ಬಲಿದಾನದ ಸ್ಮರಣೆಗಾಗಿ ಉಡುಗೊರೆ ನೀಡಲಾಗಿದೆ.

ಮೂರು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ಬಂದಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು, ಪಾಕಿಸ್ತಾನದ ವಿರುದ್ಧ 1971ರಲ್ಲಿ ಯುದ್ಧ ಗೆದ್ಧ 50ನೇ ವರ್ಷಾಚರಣೆಯ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.ಈ ವೇಳೆ ಸೇನೆಯು ವೈಮಾನಿಕ ಪ್ರದರ್ಶನ ಮತ್ತು ರಕ್ಷಣಾ ಸಾಮಗ್ರಿಗಳನ್ನು ಪ್ರದರ್ಶಿಸಿತು.

ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನಿ ಶೇಖ್ ಹಸೀನಾ, ಸಚಿವರು, ರಾಜತಾಂತ್ರಿಕರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.ಬಾಂಗ್ಲಾದೊಂದಿಗಿನ ಮೈತ್ರಿಗೆ ಭಾರತ ಯಾವಾಗಲೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಕೋವಿಂದ ಹೇಳಿದರು.

ಜೀರ್ಣೋದ್ಧಾರಗೊಳಿಸಲಾಗಿರುವ ಇಲ್ಲಿನ ರಮನಾ ಕಾಳಿ ಮಂದಿರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಶುಕ್ರವಾರ (ಡಿ.17) ಉದ್ಘಾಟಿಸಲಿದ್ದಾರೆ.

1971ರಲ್ಲಿ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಪಡೆಗಳು ‘ಆಪರೇಷನ್ ಸರ್ಚ್‌ಲೈಟ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಈ ದೇವಸ್ಥಾನವನ್ನು ನಾಶಪಡಿಸಿದ್ದವು. ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದ ಪಾಕಿಸ್ತಾನ ಪಡೆಗಳು, ನೂರಾರು ಜನ ಭಕ್ತರು ಹಾಗೂ ದೇಗುಲದಲ್ಲಿದ್ದವರನ್ನು ಹತ್ಯೆ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.