ಮಂಗಳವಾರ, ಅಕ್ಟೋಬರ್ 26, 2021
21 °C
ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್‌ ಮಾತು

ನಾನು ಭಾರತದ ಕೋವಿಶೀಲ್ಡ್‌ ಲಸಿಕೆ ಪಡೆದಿದ್ದೇನೆ: ಅಬ್ದುಲ್ಲಾ ಶಾಹೀದ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯಸಭೆ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್‌ ಅವರು, ತಾವು ಭಾರತದಲ್ಲಿ ತಯಾರಾದ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ ಪಡೆದಿದ್ದೇನೆ ಎಂದು ಶುಕ್ರವಾರ ಹೇಳಿದರು.

ವಿಶ್ವದಾದ್ಯಂತ ಇತರ ದೇಶಗಳೂ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿವೆ. ಬ್ರಿಟಿಷ್‌–ಸ್ವೀಡಿಷ್‌ನ ಔಷಧ ಕಂಪನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಭಾರತದಲ್ಲಿ ಪುಣೆ ಮೂಲದ ಸೀರಂ ಸಂಸ್ಥೆ ತಯಾರಿಸಿದೆ.

ಓದಿ: 

‘ನಾನು ಕೋವಿಶೀಲ್ಡ್‌ ಪಡೆದಿದ್ದೇನೆ. ಭಾರತದಲ್ಲಿ ತಯಾರಾದ ಈ ಲಸಿಕೆ ಸ್ವೀಕಾರಾರ್ಹ ಅಥವಾ ಇಲ್ಲ ಎಂದು ಎಷ್ಟು ದೇಶಗಳು ಒಪ್ಪಿವೆ ಎಂದು ತಿಳಿದಿಲ್ಲ. ಹೆಚ್ಚಿನ ದೇಶಗಳಿಗೆ ಕೋವಿಶೀಲ್ಡ್‌ ತಲುಪಿದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. 

ಕೋವಿಡ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ನಾವುದೇ ಸಂಸ್ಥೆ ಮಾನ್ಯತೆ ನೀಡಬೇಕೇ ಎಂಬ ಪ್ರಶ್ನೆಗೆ, ‘ಲಸಿಕೆ ಪಡೆದು ನಾನು ಬದುಕಿದ್ದೇನೆ. ಅನ್ಯರ ಬಗ್ಗೆ ತಿಳಿದಿಲ್ಲ. ಇದಕ್ಕೆ ವೈದ್ಯಕೀಯ ಪರಿಣತರು ಉತ್ತರಿಸಬೇಕು. ನಾನಲ್ಲ’ ಎಂದು ಹೇಳಿದರು.

ಭಾರತ ಸುಮಾರು 100 ದೇಶಗಳಿಗೆ 6.6 ಕೋಟಿ ಡೋಸ್‌ ಲಸಿಕೆಗಳನ್ನು ರಫ್ತು ಮಾಡಿದೆ. ಶಾಹಿದ್ ಅವರ ತಾಯ್ನಾಡು ಮಾಲ್ಡೀವ್ಸ್‌ಗೆ ಜನವರಿಯಲ್ಲಿ 1 ಲಕ್ಷ ಡೋಸ್‌ ಲಸಿಕೆ ರಫ್ತಾಗಿದ್ದು, ಇದು ಲಸಿಕೆ ಪಡೆದ ಮೊದಲ ರಾಷ್ಟ್ರವಾಗಿದೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು