ಶನಿವಾರ, ನವೆಂಬರ್ 28, 2020
25 °C
ಸೋಲನ್ನು ಒಪ್ಪಿಕೊಳ್ಳದ ಅಮೆರಿಕದ ಅಧ್ಯಕ್ಷ ಟ್ರಂಪ್‌

ನಾನು ಈ ಚುನಾವಣೆಯಲ್ಲಿ ಗೆದ್ದಿದ್ದೇನೆ: ಟ್ರಂಪ್‌ ಪುನರುಚ್ಛಾರ

ಎ‍ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮತದಾನದಲ್ಲಿ ವಂಚನೆ ನಡೆದಿದೆ,' ಎಂಬ ಆರೋಪವನ್ನು ಪುನರುಚ್ಛರಿಸಿದ್ದಾರೆ.

‘ನಾನು ಬೈಡನ್ ವಿರುದ್ಧ ಚುನಾವಣೆಯಲ್ಲಿ ಗೆದ್ದಿದ್ದೇನೆ,' ಎಂಬ ತಮ್ಮ ವಾದವನ್ನು ಮುಂದುವರಿಸಿದ್ದಾರೆ.

‘ನಾನು ಚುನಾವಣೆ ಗೆದ್ದಿದ್ದೇನೆ, ದೇಶದಾದ್ಯಂತ ಮತದಾನದಲ್ಲಿ ಮೋಸ ನಡೆದಿದೆ‘ ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್ ಪೋಸ್ಟ್‌ ಜತೆಗೆ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ವರದಿಯ ತುಣಕು ಹಾಗೂ ಅಮೆರಿಕದ ನಕ್ಷೆಯೊಂದಿಗೆ ಟ್ಯಾಗ್‌ ಮಾಡಿದ್ದಾರೆ. ಆ ಪತ್ರಿಕೆಯ ವರದಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಅವರು ಪಡೆದಿರುವ ಮತಗಳಿಗಿಂತ ಈ ಬಾರಿ 10.1 ದಶಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಅದೇ ಸರಣಿಯ ಟ್ವೀಟ್‌ನಲ್ಲಿ ಚುನಾಯಿತ ಅಧ್ಯಕ್ಷ ಬೈಡನ್ ನಾಲ್ಕು ವರ್ಷಗಳ ಹಿಂದೆ ಹಿಲರಿ ಕ್ಲಿಂಟನ್ ಅವರ ಒಟ್ಟು ಮೊತ್ತಕ್ಕಿಂತ 12.6 ಮಿಲಿಯನ್ ಮತಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ವಿದ್ಯಾವಂತರಿರುವ ನಗರ ಮತ್ತು ಉಪ ನಗರ ಕೌಂಟಿಗಳಲ್ಲಿ ವಿಶೇಷವಾಗಿ ‌ರಿಪಬ್ಲಿಕನ್‌ ಪ್ರದೇಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಚುನಾವಣೆ ನಂತರ ಹಾಗೂ ಮತ ಎಣಿಕೆ ಮುಗಿದು, ಮಾಧ್ಯಮಗಳಲ್ಲಿ ಬೈಡನ್ – ಕಮಲಾ ಜೋಡಿ ವಿಜೇತರಾಗಿದ್ದಾರೆ ಎಂದು ಪ್ರಕಟವಾದ ನಂತರವೂ, ಟ್ರಂಪ್ ಅವರು ಚುನಾವಣಾ ಸೋಲನ್ನು ಒಪ್ಪಿಕೊಂಡಿಲ್ಲ. ಅದೇ ರೀತಿ ‘ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್‌ ಮತ್ತು ಅವರ ತಂಡದ ಆರೋಪಕ್ಕೆ ಯಾವುದೇ ಪುರಾವೆಗಳೂ ಇಲ್ಲ ಎಂದು ಚುನಾವಣಾ ಅಧಿಕಾರಿಗಳು ವಾದಿಸುತ್ತಿದ್ದಾರೆ. ಈ ನಡುವೆ ಟ್ರಂಪ್ ಅವರ ಚುನಾವಣಾ ತಂಡದವರು, ಪ್ರಮುಖ ರಾಜ್ಯಗಳಲ್ಲಿ ಬಂದಿರುವ ಫಲಿತಾಂಶದ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು