ಶನಿವಾರ, ಮಾರ್ಚ್ 25, 2023
24 °C

ಪೊಖರಾ ವಿಮಾನ ಅಪಘಾತ: ನೇಪಾಳದ ಪತ್ರಕರ್ತನ ದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳದ ಪೊಖರಾದಲ್ಲಿ ಭಾನುವಾರ ಪತನವಾದ ಯೇತಿ ಏರ್‌ಲೈನ್ಸ್‌ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮೃತರಾಗಿದ್ದು, ಇವರಲ್ಲಿ ನೇಪಾಳದ ಖ್ಯಾತ ಪತ್ರಕರ್ತ ತ್ರಿಭುವನ್‌ ಪೌಡ್ಯಾಲ್‌ ಕೂಡ ಒಬ್ಬರು ಎನ್ನಲಾಗಿದೆ. 

ನೇಪಾಳದ ಪತ್ರಕರ್ತರ ಒಕ್ಕೂಟದ (ಎಫ್‌ಎನ್‌ಜೆ) ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ 37 ವರ್ಷದ ಪೌಡ್ಯಾಲ್‌ ಅವರ ಮೃತದೇಹವನ್ನು ಗುರುತಿಸಲಾಗಿದೆ. ಪೌಡ್ಯಾಲ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಪೌಡ್ಯಾಲ್ ಅವರ ಅಕಾಲಿಕ ಮರಣಕ್ಕೆ ಎಫ್‌ಎನ್‌ಜೆ ಸಂತಾಪ ಸೂಚಿಸಿದೆ.

ಪೊಖರ ನಿವಾಸಿಯಾಗಿದ್ದ ಪೌಡ್ಯಾಲ್ ಅವರು ಸ್ಥಳೀಯ ದಿನಪತ್ರಿಕೆ, ಎಫ್‌ಎಂ ರೇಡಿಯೋ ಹಾಗೂ ದೂರದರ್ಶನ ಚಾನಲ್ ಸೇರಿದಂತೆ ಹಲವು ಮಾಧ್ಯಮದೊಂದಿಗೆ ಸಂಪರ್ಕ ಹೊಂದಿದ್ದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು