ಶನಿವಾರ, ಜುಲೈ 2, 2022
25 °C

ದಾಳಿ ನಿಲ್ಲಿಸಿ, ಬೇಡಿಕೆ ಈಡೇರಿಸಿದರೆ ಮಿಲಿಟರಿ ಕಾರ್ಯಾಚರಣೆಗೆ ತಡೆ: ಪುಟಿನ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮಾಸ್ಕೋ: ಮಿಲಿಟರಿ ದಾಳಿಯನ್ನು ನಿಲ್ಲಿಸಿ, ನಮ್ಮ ಬೇಡಿಕೆಗಳನ್ನು ಉಕ್ರೇನ್‌ ಈಡೇರಿಸಿದರೆ ಮಾತ್ರ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರೊಂದಿಗಿನ ಸಮಾಲೋಚನೆ ವೇಳೆ ಹೇಳಿದ್ದಾರೆ.

ಇಬ್ಬರೂ ನಾಯಕರು ಇಂದು ದೂರವಾಣಿ ಮೂಲಕ ಸದ್ಯದ ಪರಿಸ್ಥಿತಿಯ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಪುಟಿನ್‌ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ‘ಟಿಎಎಸ್‌ಎಸ್‌’ ವರದಿ ಮಾಡಿದೆ.

ಉಕ್ರೇನ್‌ ಬಂಡುಕೋರರ ಹಿಡಿತದಲ್ಲಿರುವ ಡಾನ್‌ಬಾಸ್‌ ಅನ್ನು ರಕ್ಷಿಸುವುದು ಮತ್ತು ಮುಖ್ಯ ಉದ್ದೇಶಗಳ ಈಡೇರಿಕೆಗಾಗಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಪ್ರಗತಿಯ ಬಗ್ಗೆ ಪುಟಿನ್‌ ವಿವರಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇದಕ್ಕೂ ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು, ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವರೊಂದಿಗೆ ಒಂದೂವರೆ ಗಂಟೆಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದರು.

ಮಾರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಉಕ್ರೇನ್‌ ವಿಫಲವಾಗಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ.

ಶನಿವಾರ ಮಾರಿಯುಪೋಲ್‌ ಅನ್ನು ಸುತ್ತುವರಿದಿದ್ದ ರಷ್ಯಾ ಪಡೆಗಳು ನಿರಂತರ ದಾಳಿ ನಡೆಸಿದ್ದವು. ಮಾನವೀಯ ಪರಿಹಾರ ಕಾರ್ಯಕ್ಕಾಗಿ, ಜನರ ಸ್ಥಳಾಂತರಕ್ಕಾಗಿ ಐದು ಗಂಟೆಗಳ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾ ಹೇಳಿತ್ತು. ಆದರೆ, ಕದನವಿರಾಮ ಉಲ್ಲಂಘಿಸಿ ರಷ್ಯಾ ದಾಳಿ ಮಾಡಿದೆ ಎಂದು ಉಕ್ರೇನ್‌ ಆರೋಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು