ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1978ರಲ್ಲಿ ಮುಚ್ಚಲಾಗಿದ್ದ ಕೆನಡಾ ವಸತಿ ಶಾಲೆಯಲ್ಲಿ 215 ಮಕ್ಕಳ ಕಳೇಬರ ಪತ್ತೆ

Last Updated 29 ಮೇ 2021, 10:51 IST
ಅಕ್ಷರ ಗಾತ್ರ

ಟೊರೊಂಟೊ: ಕೆನಡಾದಲ್ಲಿ 1978ರಲ್ಲೇ ಮುಚ್ಚಲಾಗಿದ್ದ ಸ್ಥಳೀಯ ಮಕ್ಕಳ ವಸತಿ ಶಾಲೆಯೊಂದರಲ್ಲಿ ಶುಕ್ರವಾರ 215 ಮಕ್ಕಳ ಕಳೇಬರ ಪತ್ತೆಯಾಗಿವೆ. ಇದರಲ್ಲಿ ಕೆಲವು ಮಕ್ಕಳು ಮೂರು ವರ್ಷಕ್ಕಿಂತಲೂ ಕಿರಿಯರು ಎಂದು ತಿಳಿದು ಬಂದಿದೆ.

ಈ ಬೆಳವಣಿಗೆಯನ್ನು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು 'ಹೃದಯ ವಿದ್ರಾವಕ' ಎಂದು ಹೇಳಿದ್ದಾರೆ.

ಈಗ ಪತ್ತೆಯಾಗಿರುವ ಕಳೇಬರ ಬ್ರಿಟಿಷ್ ಕೊಲಂಬಿಯಾದ 'ಕಾಮ್‌ಲೂಪ್ಸ್‌ ಇಂಡಿಯನ್ ವಸತಿ ಶಾಲೆ'ಯಲ್ಲಿ ವಿದ್ಯಾರ್ಥಿಗಳಾಗಿದ್ದವರದ್ದು ಎಂದು 'ಟಿಕೆಎಮ್ಲುಪ್ಸ್‌ ಟೆ ಸೆಕ್ವೆಪೆಮ್‌ಕೆ ನೇಷನ್' ಎಂಬ ಸಂಸ್ಥೆ ಹೇಳಿದೆ. ರಾಡಾರ್ ತಜ್ಞರ ಸಹಾಯದಿಂದ ಕಳೇಬರಗಳನ್ನು ಪತ್ತೆಮಾಡಲಾಗಿದೆ. 'ಈ ಸಮಯದಲ್ಲಿ ನಾವು ಉತ್ತರಗಳಿಗಿಂತಲೂ ಹೆಚ್ಚು ಪ್ರಶ್ನೆಗಳನ್ನೇ ಹೊಂದಿದ್ದೇವೆ,' ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಥಳೀಯ ಮಕ್ಕಳನ್ನು ತಮ್ಮ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸಿದ್ದ ಕೆನಡಾದ ವಸತಿ ಶಾಲಾ ವ್ಯವಸ್ಥೆಯು 'ಸಾಂಸ್ಕೃತಿಕ ನರಮೇಧ'ವನ್ನೇ ನಡೆಸಿದೆ. ಈ ವಸತಿ ಶಾಲೆಗಳ ವ್ಯವಸ್ಥೆಯ ಕುರಿತು ನಡೆಸಿದ ತನಿಖೆಗಳು 2015ರಲ್ಲಿ ಈ ಸಂಗತಿಯನ್ನು ಬಯಲು ಮಾಡಿವೆ.

ಈ ವಸತಿ ಶಾಲೆಗಳಲ್ಲಿ ಸ್ಥಳೀಯ ಮಕ್ಕಳಿಗೆ ತಮ್ಮ ಭಾಷೆಯನ್ನು ಆಡಲು ಅಥವಾ ಅವರ ಸಂಸ್ಕೃತಿಯನ್ನು ಪಾಲಿಸಲು ಅನುಮತಿ ನೀಡಲಾಗುತ್ತಿರಲಿಲ್ಲ. ಅಲ್ಲದೆ, ಬಹುತೇಕ ಮಕ್ಕಳು ದುರುಪಯೋಗಕ್ಕೆ ಬಲಿಯಾಗಿದ್ದರು ಎಂಬುದು ತನಿಖೆಗಳಿಂದ ಗೊತ್ತಾಗಿದೆ.

1840 ರಿಂದ 1990 ರವರೆಗೆ ಒಟ್ಟಾವಾ ಪರವಾಗಿ ಕ್ರಿಶ್ಚಿಯನ್ ಚರ್ಚುಗಳು ನಡೆಸುತ್ತಿದ್ದ ವಸತಿ ಶಾಲೆಗಳಿಗೆ ದಾಖಲಾದ 1,50,000 ಮಕ್ಕಳಲ್ಲಿ ಅನೇಕರು ಅನುಭವಿಸಿದ ಭಯಾನಕ ದೈಹಿಕ ಕಿರುಕುಳ, ಅತ್ಯಾಚಾರ, ಅಪೌಷ್ಟಿಕತೆ ಮತ್ತು ಇತರ ದೌರ್ಜನ್ಯಗಳನ್ನು ತನಿಖಾ ವರದಿ ಬಹಿರಂಗಪಡಿಸಿದೆ.

ಈ ವಸತಿ ಶಾಲೆಗಳಲ್ಲಿ 4100 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ತನಿಖಾ ವರದಿ ಹೇಳಿದೆ. ಈಗ 'ಕಾಮ್‌ಲೂಪ್ಸ್‌ ಇಂಡಿಯನ್ ವಸತಿ ಶಾಲೆ'ಯ ಮೈದಾನದದಲ್ಲಿ 215 ಮಕ್ಕಳ ಕಳೇಬರಗಳು ಪತ್ತೆಯಾಗಿವೆ.

ಈ ಕುರಿತು ಟ್ವೀಟ್‌ ಮಾಡಿರುವ ಕೆನಡಾದ ಪ್ರಧಾನ ಮಂತ್ರಿ 'ಈ ವಿಷಯದಿಂದ ನನ್ನ ಹೃದಯ ಒಡೆದಂತಾಗಿದೆ. ಇದು ನಮ್ಮ ದೇಶದ ಇತಿಹಾಸದ ಆ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವನ್ನು ನೆನಪಿಸುತ್ತದೆ' ಎಂದಿದ್ದಾರೆ.

ದೇಶದ ಹಿಂಸಾತ್ಮಕ ವಸತಿ ಶಾಲಾ ವ್ಯವಸ್ಥೆಯ ಬಗ್ಗೆ ಕೆನಡಾ 2008ರಲ್ಲಿ ಕ್ಷಮೆಯನ್ನೂ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT