ಶನಿವಾರ, ಜುಲೈ 2, 2022
25 °C

ಉಕ್ರೇನ್‌ಗೆ ಅಂಟೋನಿಯೊ ಗುಟೆರೆಸ್‌ ಭೇಟಿ ವೇಳೆ ವೈಮಾನಿಕ ದಾಳಿ ನಿಜ ಎಂದ ರಷ್ಯಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಾಸ್ಕೊ: ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್‌ ಭೇಟಿಯ ಸಂದರ್ಭದಲ್ಲಿ ಉಕ್ರೇನ್‌ನ ಕೀವ್ ನಗರದ ಮೇಲೆ ವೈಮಾನಿಕ ದಾಳಿ ನಡೆಸಿರುವುದನ್ನು ರಷ್ಯಾದ ರಕ್ಷಣಾ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.

ರಷ್ಯಾದ ಏರೋಸ್ಪೇಸ್ ಪಡೆಗಳ ಉನ್ನತ- ಗುರಿ ತಪ್ಪದ, ದೀರ್ಘ ಶ್ರೇಣಿಯ ವಾಯು ಆಧಾರಿತ ಶಸ್ತ್ರಾಸ್ತ್ರಗಳು, ಆರ್ಟಿಯೋಮ್ ಕ್ಷಿಪಣಿ ಮತ್ತು ಕೀವ್‌ನಲ್ಲಿನ ಬಾಹ್ಯಾಕಾಶ ಸಂಸ್ಥೆಯ ತಯಾರಿಕಾ ಕಟ್ಟಡಗಳನ್ನು ನಾಶಪಡಿಸಿದೆ' ಎಂದು ಸಚಿವಾಲಯವು ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ತನ್ನ ದೈನಂದಿನ ಹೇಳಿಕೆಯಲ್ಲಿ ತಿಳಿಸಿದೆ.

ಗುರುವಾರ ನಡೆದ ಆಕ್ರಮಣದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಶುಕ್ರವಾರ ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ರಾಜಧಾನಿಯಲ್ಲಿ ನಡೆದ ಮೊದಲ ದಾಳಿ ಇದಾಗಿದ್ದು, ‘ಅದು ಯುದ್ಧಪೀಡಿತ ಪ್ರದೇಶವೆಂಬುದು ನಿಜ. ಆದರೆ ನಮ್ಮ ತಂಡ ಇರುವ ಪ್ರದೇಶದ ಸಮೀಪದಲ್ಲೇ ದಾಳಿ ನಡೆದಿರುವುದು 'ಆಘಾತಕಾರಿ' ಎಂದು ಗುಟೆರೆಸ್ ಅವರ ವಕ್ತಾರರು ಕರೆದಿದ್ದಾರೆ.

ಗುಟೆರೆಸ್ ಗುರುವಾರ ಬುಕಾ ಮತ್ತು ಕೀವ್‌ನ ಇತರ ಉಪನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ರಷ್ಯಾ ಯುದ್ಧ ಅಪರಾಧಗಳನ್ನು ಮಾಡಿದೆ ಎಂದು ಆರೋಪಿಸಲಾಗಿದೆ.

ತನ್ನ ಪಡೆಗಳು ಗುರುವಾರ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಿದ್ದು, ಉಕ್ರೇನ್ ರೈಲ್ವೆ ಹಬ್‌ಗಳಲ್ಲಿನ ಮೂರು ವಿದ್ಯುತ್ ಉಪಕೇಂದ್ರಗಳನ್ನು ನಾಶಪಡಿಸಿದೆ ಮತ್ತು ತೋಕಾ-ಯು ಕ್ಷಿಪಣಿ ಉಡಾವಣೆ ಮಾಡಿದೆ. ರಷ್ಯಾದ ಹಿಡಿತದಲ್ಲಿರುವ ಖೆರ್ಸನ್ ನಗರದ ಮೇಲೆ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು