ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧ ಯುದ್ಧವೆಂಬ ಚಿಂತನೆಯೂ ಸ್ವೀಕಾರಾರ್ಹವಲ್ಲ: ರಷ್ಯಾ

Last Updated 27 ಜನವರಿ 2022, 13:35 IST
ಅಕ್ಷರ ಗಾತ್ರ

ಮಾಸ್ಕೋ (ರಷ್ಯಾ): ‘ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಚಿಂತನೆಯೂ ಸ್ವೀಕಾರಾರ್ಹವಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರರು ಗುರುವಾರ ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುವ ಭೀತಿ ನಿವಾರಣೆಯ ನಿಟ್ಟಿಯಲ್ಲಿ ಇದು ರಷ್ಯಾದಿಂದ ಹೊರಬಿದ್ದಿರುವ ಮತ್ತೊಂದು ಅಧಿಕೃತ ಹೇಳಿಕೆ.

‘ನಮ್ಮ ದೇಶವು ಯಾರ ಮೇಲೂ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ನಮ್ಮ ಜನರ ನಡುವಿನ ಯುದ್ಧದ ಚಿಂತನೆಯು ಸಹ ಸ್ವೀಕಾರಾರ್ಹವಲ್ಲ’ ಎಂದು ಸಚಿವಾಲಯದ ವಕ್ತಾರ ಅಲೆಕ್ಸಿ ಜೈಟ್ಸೆವ್ ಹೇಳಿದರು.

2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡಿರುವ ರಷ್ಯಾ ಪೂರ್ವ ಉಕ್ರೇನ್‌ನಲ್ಲಿ ದಂಗೆಯನ್ನು ಬೆಂಬಲಿಸಿತ್ತು. ಸದ್ಯ ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಮತ್ತು ನೆರೆಯ ಬೆಲಾರಸ್‌ನಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಯುದ್ಧ ಭೀತಿಗೆ ಕಾರಣವಾಗಿದೆ.

‘ಪೂರ್ವ ಉಕ್ರೇನ್‌ನಲ್ಲಿನ ಪ್ರತ್ಯೇಕತಾವಾದಿ ಸಂಘರ್ಷಕ್ಕೂ ರಷ್ಯಾಕ್ಕೂ ಯಾವುದೇ ಸಂಬಂಧವಿಲ್ಲ. ಅದೊಂದು ಅಂತರ್ಯುದ್ಧ’ ಎಂಬ ರಷ್ಯಾದ ವಾದವನ್ನು ಉಕ್ರೇನ್‌ ತಿರಸ್ಕರಿಸಿದೆ. ರಷ್ಯಾವು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಅದು ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT