ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಮೇಲೆ ನಿರ್ಬಂಧ; ನಾರ್ಡ್ ಸ್ಟ್ರೀಮ್ 2 ಯೋಜನೆ ರದ್ದು: ಅಮೆರಿಕ ಘೋಷಣೆ

Last Updated 24 ಫೆಬ್ರುವರಿ 2022, 11:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಅಮೆರಿಕ ಹಾಗೂ ಯುರೋಪ್ ಮಿತ್ರ ರಾಷ್ಟ್ರಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ.

ರಷ್ಯಾದಿಂದ ಜರ್ಮನಿಗೆ ನೈಸರ್ಗಿಕ ಅನಿಲವನ್ನು ಪೂರೈಸುವ ಬಹುನಿರೀಕ್ಷಿತ 'ನಾರ್ಡ್ ಸ್ಟ್ರೀಮ್ 2' ಗ್ಯಾಸ್ ಪೈಪ್‌ಲೈನ್ ಯೋಜನೆ ರದ್ದುಗೊಳಿಸಲಾಗಿದೆ ಎಂದು ಅಮೆರಿಕ ಘೋಷಿಸಿದೆ.

ನಾರ್ಡ್ ಸ್ಟ್ರೀಮ್ 2 ಎಜಿ ಮತ್ತು ಅದರ ಕಾರ್ಪೋರೇಟ್ ಕಚೇರಿಗಳ ಮೇಲೆ ಜರ್ಮನಿ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ ಅಮೆರಿಕ ಈ ಘೋಷಣೆ ಮಾಡಿದೆ.

ನಾರ್ಡ್ ಸ್ಟ್ರೀಮ್ 2 ರಷ್ಯಾದ ಮಹತ್ತರ ಭೌಗೋಳಿಕ ರಾಜತಾಂತ್ರಿಕ ಯೋಜನೆಗಳಲ್ಲಿ ಒಂದಾಗಿದೆ. ಈ ಗ್ಯಾಸ್ ಪೈಪ್‌ಲೈನ್ ವಿಚಾರದಲ್ಲಿ ಅಮೆರಿಕ ಹಾಗೂ ರಷ್ಯಾ ನಡುವೆ ಹಿಂದಿನಿಂದಲೇ ತೀವ್ರ ಸಂಘರ್ಷ ಏರ್ಪಟ್ಟಿತ್ತು.

ನೈಸರ್ಗಿಕ ಅನಿಲಕ್ಕಾಗಿ ಯುರೋಪ್ ರಾಷ್ಟ್ರಗಳು ರಷ್ಯಾದ ಮೇಲಿನ ಅವಲಂಬನೆ ತಪ್ಪಿಸಲು ಅಮೆರಿಕವು ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT