ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಹೋರಾಟ ತೈವಾನ್‌ಗೆ ಸ್ಫೂರ್ತಿ: ಚೀನಾಗೆ ಎಚ್ಚರಿಕೆ ನೀಡಿದ ವಿದೇಶಾಂಗ ಸಚಿವ

Last Updated 7 ಮಾರ್ಚ್ 2022, 11:35 IST
ಅಕ್ಷರ ಗಾತ್ರ

ತೈಪೆ: ರಷ್ಯಾದ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿರುವ ಉಕ್ರೇನಿಯನ್ನರು ತೈವಾನ್ ಜನರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ತೈವಾನ್‌ ವಿದೇಶಾಂಗ ಸಚಿವ ‘ಜೋಸೆಫ್‌ ವು’ ತಿಳಿಸಿದ್ದಾರೆ. ಆ ಮೂಲಕ ವೈರಿ ರಾಷ್ಟ್ರ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ‘ದೊಡ್ಡ ಸಂಕಷ್ಟಗಳ ಹೊರತಾಗಿಯೂ ಉಕ್ರೇನ್ ಸರ್ಕಾರ ಮತ್ತು ಜನರು ಪ್ರಚಂಡ ಧೈರ್ಯದಿಂದ ಹೋರಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಸರ್ವಾಧಿಕಾರಿಯ ಬೆದರಿಕೆ ಹಾಗೂ ದಬ್ಬಾಳಿಕೆಯನ್ನು ನೀವು(ಉಕ್ರೇನಿಯನ್ನರು) ಎದುರಿಸಿದ್ದೀರಿ. ತೈವಾನ್ ಜನರಿಗೆ ಸ್ಫೂರ್ತಿಯಾಗಿದ್ದೀರಿ. ನನ್ನ ಹೃದಯದ ಆಳದಿಂದ ಈ ಮಾತನ್ನು ಹೇಳುತ್ತಿದ್ದೇನೆ’ ಎಂದು ಜೋಸೆಫ್‌ ತಿಳಿಸಿದ್ದಾರೆ.

‘ತೈವಾನ್‌ನಲ್ಲಿನ ಬಹುತೇಕರು ಉಕ್ರೇನ್ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಚೀನಾದ ಪಡೆಗಳ ಆಕ್ರಮಣದ ಬೆದರಿಕೆಯನ್ನು ಎದುರಿಸುತ್ತಿರುವ ತೈವಾನ್ ಹಾಗೂ ಉಕ್ರೇನ್‌ ನಡುವೆ ಹಲವು ಹೋಲಿಕೆಗಳಿವೆ’ ಎಂದು ಜೋಸೆಫ್‌ ಹೇಳಿದ್ದಾರೆ.

ಇದೇ ವೇಳೆ ಉಕ್ರೇನ್‌ ನಿರಾಶ್ರಿತರಿಗೆ ಲಕ್ಷಾಂತರ ಡಾಲರ್ ಸಹಾಯವನ್ನು ತೈವಾನ್‌ ಘೋಷಿಸಿದೆ.

ಚೀನಾದಿಂದ ಮಿಲಿಟರಿ ಬೆದರಿಕೆಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಯುರೋಪಿಯನ್‌ ಒಕ್ಕೂಟ ತೈವಾನ್‌ ಬೆಂಬಲಕ್ಕೆ ನಿಂತಿದೆ.

ಅಮೆರಿಕ ಹಾಗೂ ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆ. 24ರಿಂದ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT