ಕೀವ್:ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವುದರ ಮಧ್ಯೆಯೂ, ಅಲ್ಲಿಂದ ತೆರಳಲು ಯತ್ನಿಸಿದ ಭಾರತದ ವಿದ್ಯಾರ್ಥಿಯೊಬ್ಬರು ಗುಂಡಿನ ದಾಳಿಗೊಳಗಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ವಿ.ಕೆ. ಸಿಂಗ್ ತಿಳಿಸಿದ್ದಾರೆ.

'ಕೀವ್ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬರು ಗುಂಡಿನ ದಾಳಿಗೆ ಒಳಗಾಗಿರುವ ಸುದ್ದಿ ಬಂದಿದೆ. ತಕ್ಷಣವೇ ಅವರನ್ನು ಕೀವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚು ಸಾವುನೋವು ಸಂಭವಿಸದಂತೆ, ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎಂದು ಸಿಂಗ್ ಹೇಳಿದ್ದಾರೆ.

ಯುದ್ಧಪೀಡಿತ ಉಕ್ರೇನ್ನಿಂದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಮೇಲ್ವಿಚಾರಣೆ ಸಲುವಾಗಿ, ಉಕ್ರೇನ್ನ ನೆರೆಹೊರೆ ರಾಷ್ಟ್ರಗಳಿಗೆ ತೆರಳಿರುವ ಕೇಂದ್ರದ ನಾಲ್ವರು ಸಚಿವರ ನಿಯೋಗದಲ್ಲಿ ಸಿಂಗ್ ಅವರೂ ಇದ್ದಾರೆ.

ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಎಸ್.ಜಿ. ಎನ್ನುವವರುಮಾರ್ಚ್ 1ರಂದು ಹಾರ್ಕಿವ್ ನಗರದಲ್ಲಿ ನಡೆದ ಷೆಲ್ ದಾಳಿಯಿಂದಾಗಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.